ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಜನರಿಗೆ ದಿನಕಳೆದಂತೆ ಬೆಲೆ ಏರಿಕೆ ಅನ್ನೋ ಪದದ ಮೇಲೆಯೇ ಜುಗುಪ್ಸೆ ಬಂದಂತಾಗಿದೆ. ನಿನ್ನೆಯಷ್ಟೇ ಹಾಲಿನ ದರ ಏರಿಕೆಯಾಗಿದೆ.
ಇನ್ನು ಬಾಡಿಗೆ, ನೀರಿನ ಬೆಲೆ ಕೇಳುವಂತಿಲ್ಲ. ಇದೇ ಏಪ್ರಿಲ್ ಒಂದರಿಂದ ಮೆಟ್ರೋ, ಬಸ್, ಹಾಲು, ಕರೆಂಟ್, ನೀರು, ಟೋಲ್ ಶುಲ್ಕ, ಕಸದ ಸೆಸ್ ಸೇರಿದಂತೆ ಏಪ್ರಿಲ್ನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿಳೋದು ಫಿಕ್ಸ್ ಆಗಿದೆ.
ಹಾಲಿನ ದರ : ಹಾಲಿನ ದರ ಪ್ರತಿ ಲೀಟರ್ಗೆ 4 ರೂ. ಹೆಚ್ಚಳ
ಕರೆಂಟ್ ಬಿಲ್: ವಿದ್ಯುತ್ ಪ್ರತಿ ಯೂನಿಟ್ಗೆ 26 ಪೈಸೆ ಹೆಚ್ಚಳ ಸಾಧ್ಯತೆ
ಕಸದ ಸೆಸ್: ಕಸದ ಸೆಸ್ ಪ್ರತಿ ಕೆ.ಜಿಗೆ 12 ರೂ. ವಿಧಿಸಿ ಪಾಲಿಕೆ ಆದೇಶ ಹೊರಡಿಸಿದೆ.
ನೀರಿನ ದರ : ನೀರಿನ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಜಲಮಂಡಳಿ ಪ್ರಸ್ತಾವನೆ
ಆಟೋ ಮೀಟರ್ ದರ : ಆಟೋ ಮೀಟರ್ ದರ ₹30ರ ಬದಲು ₹40ಕ್ಕೆ ಏರಿಕೆ ಸಾಧ್ಯತೆ
ವಾಹನ ಮೇಲಿನ ಟ್ಯಾಕ್ಸ್: 10 ಲಕ್ಷದೊಳಗಿನ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್
ಟೋಲ್ ಶುಲ್ಕ: ಟೋಲ್ ಸುಂಕ ಶೇಕಡ.5 ರಷ್ಟು ಹೆಚ್ಚಳ
ಟೀ, ಕಾಫಿ ದರ: ಹಾಲಿನ ದರ ಏರಿಕೆ ಬೆನ್ನಲ್ಲೇ ಟೀ-ಕಾಫಿ ರೇಟ್ 15% ರಷ್ಟು ಹೆಚ್ಚಳ