ಇಷ್ಟ ಬಂದಂತೆ ಸಿನಿಮಾ ಟಿಕೆಟ್ ದರ ನಿಗದಿ ಪಡಿಸುತ್ತಿದ್ದಾರೆ ಎಂದಿದ್ದಕ್ಕೆ ಗೃಹ ಸಚಿವರು ಏನಂದ್ರು ನೋಡಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಏಕರೂಪ ಟಿಕೆಟ್ ದರವನ್ನು ನಿಗದಿಪಡಿಸಲು ಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲಾ? ಎಂದು ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಗೋವಿಂದ ರಾಜು ಪ್ರಶ್ನೆ ಇಟ್ಟಿದ್ದರು. ಇದಕ್ಕೆ ಗೃಹ ಸಚಿವ ಪರಮೇಶ್ವರ್‌‌‌ ಉತ್ತರ ನೀಡಿದ್ದಾರೆ.

ಕನ್ನಡ ಸಿನಿಮಾಗಳಿಗೆ ಬಹಳ ಕಡಿಮೆ ದರ, ಬೇರೆ ಭಾಷೆಯ ಸಿನಿಮಾಗಳಿಗೆ ₹500 ರಿಂದ ₹1000 ವರೆಗೆ ವಸೂಲಿ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರು 2017 ರ ಬಜೆಟ್‌ನಲ್ಲಿ ಏಕರೂಪದ ದರ ₹200 ನಿಗದಿ ಮಾಡುತ್ತೇವೆ ಎಂದಿದ್ದರು. ಆದರೆ ಅದೂ ಕೂಡ ಜಾರಿಗೆ ಬಂದಿಲ್ಲ. ಕನ್ನಡ ಹಾಗೂ ಬೇರೆ ಎಲ್ಲಾ ಸಿನಿಮಾಗಳಿಗೂ ಒಂದೇ ದರ ಇರಬೇಕು ಎಂದರು ಎಂಎಲ್ಸಿ ಗೋವಿಂದರಾಜು ಹೇಳಿದ್ದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಸಿದ್ದರಾಮಯ್ಯನವರು 2017 ರ ಬಜೆಟ್‌ನಲ್ಲಿ ಏಕರೂಪದ ದರ ಪ್ರಸ್ತಾಪ ಮಾಡಿದ ಮೇಲೆ ಸರ್ಕಾರಿ ಆದೇಶ ಕೂಡ ಹೊರಡಿಸಲಾಗಿತ್ತು. ಆದರೆ, ಥಿಯೇಟರ್ ಮಾಲೀಕರು ಆದೇಶಕ್ಕೆ ಸ್ಟೇ ತಂದರು. ಸ್ಟೇ ತಂದ ಮೇಲೆ ಸರ್ಕಾರ ಆದೇಶ ವಾಪಸ್ ಪಡೆಯಬೇಕಾಯಿತು. ಮತ್ತೆ ಮೊದಲಿನ ಹಾಗೆ ಚಿತ್ರಮಂದಿರದ ಮಾಲೀಕರು ದರ ನಿಗದಿ ಮಾಡುವ ಪದ್ಧತಿ ಮುಂದುವರಿದಿದೆ.

ಮುಂದಿನ ದಿನಗಳಲ್ಲಿ ಏಕರೂಪದ ದರ ಪದ್ಧತಿಯನ್ನು ಜಾರಿಗೆ ತರುತ್ತೇವೆ. ದರಗಳನ್ನು ನಿಯಂತ್ರಿಸದಿದ್ದರೆ, ಚಿತ್ರಮಂದಿರದ ಮಾಲೀಕರು ಅವರವರ ಇಷ್ಟದಂತೆ ದರ ನಿಗದಿಪಡಿಸುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!