ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನರಿಗೆ ಕರೆಂಟ್ ಶಾಕ್ ಕೊಡಲು ಸಜ್ಜಾಗಿದೆ. ಕೆಎಸ್‌ಆರ್‌ಟಿಸಿ ಬಸ್ ದರ, ಬಿಎಂಆರ್‌ಸಿಎಲ್ ಮೆಟ್ರೋ ದರ ಏರಿಕೆಯ ನಂತರ ಈಗ ಕರೆಂಟ್ ಬಿಲ್ ಏರಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಿದೆ.
ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಸೇರಿದಂತೆ ರಾಜ್ಯದ ಐದು ವಿದ್ಯುತ್ ನಿಗಮಗಳು ವಿದ್ಯುತ್ ಪ್ರತಿ ಯುನಿಟ್ ದರ ಏರಿಸುವಂತೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರತಿ ಯೂನಿಟ್ ಗೆ 1 ರಿಂದ 1.50ರೂವರೆಗೆ ಹೆಚ್ಚಿಸುವಂತೆ ಕಂಪನಿಗಳು ಮನವಿ ಮಾಡಿವೆ. ಎಸ್ಕಾಂಗಳು ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಪರಿಷ್ಕರಣೆಗೆ ಪಟ್ಟು ಹಿಡಿದಿವೆ. ಎಸ್ಕಾಂಗಳ ಪ್ರಸ್ತಾವನೆಯನ್ನು ಕೆಇಆರ್‌ಸಿ ಪರಿಶೀಲನೆ ಮಾಡಿದ್ದು, ಆ ಪ್ರಸ್ತಾವನೆಗೆ ಕೆಇಆರ್‌ಸಿ ಅಧಿಕಾರಿಗಳು ಅಸ್ತು ಎಂದಿದ್ದಾರೆ. ಹೀಗಾಗಿ ವಿಧಾನಸಭಾ ಅಧಿವೇಶನದ ಬಳಿಕ ವಿದ್ಯುತ್ ದರ ಏರಿಕೆ ಘೋಷಣೆ ಸಾಧ್ಯತೆ ಇದೆ.