ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ನನ್ನು ಭೇಟಿಗೆ ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ಜೊತೆ ನಟ ವಿನೋದ್ ರಾಜ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬೆಳಿಗ್ಗೆ 12 ಗಂಟೆಗೆ ವಿನೋದ್ ರಾಜ್ ದರ್ಶನ್ ಭೇಟಿಗೆ ಆಗಮಿಸಿದರು ಆದರೆ ಅವಕಾಶ ಸಿಗದ ಹಿನ್ನೆಲೆ ಮಧ್ಯಾಹ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಜೈಲಿಗೆ ಹೋಗಿ ಮಾತುಕತೆ ನಡೆಸಿದರು.
ದರ್ಶನ್ ವಿನೋದ್ ರಾಜ್ ನೋಡುತ್ತಿದ್ದಂತೆ ತಬ್ಬಿಕೊಂಡು ಕಣ್ಣೀರು ಹಾಕಿದ್ದಾನೆ.ದರ್ಶನ್ ಭೇಟಿಯಾಗಿ ಹೊರ ಬಂದಾಗಲೂ ನಟ ವಿನೋದ್ ರಾಜ್ ನೋವಿನಲ್ಲಿ ಮಾತನಾಡಿದ್ದಾರೆ.
ನನ್ನ ಮನೋಭಾವದಲ್ಲಿ ದರ್ಶನ ಕಲಾವಿದರು ಬಂದ ತಕ್ಷಣ ನನ್ನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಅದೇ ಪ್ರೀತಿ ಅದೇ ಆತ್ಮೀಯತೆ ಈಗಾಗಲು ಅವರಲ್ಲಿ ಇದೆ. ಸ್ವೇಚ್ಛಾನುಸಾರವಾಗಿ ಓಡಾಡುತ್ತಿದ್ದ ಮನುಷ್ಯ ದರ್ಶನ್ ಆದರೆ ಅವರು ಇಂತಹ ಪರಿಸ್ಥಿತಿಯಲ್ಲಿ ನೋಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇದು ಸರಿ ಇದು ತಪ್ಪು ಎಂದು ಕ್ಷಣದಲ್ಲಿ ಹೇಳಿಬಿಡಬಹುದು ಆದರೆ ಅಲ್ಲಿ ಪ್ರಾಣ ಕಳೆದುಕೊಂಡ ತಂದೆ ತಾಯಿ ಹಾಗೂ ಗರ್ಭದಲ್ಲಿ ಮಗು ಇರುವ ಪತ್ನಿ ನೆನೆಸಿಕೊಂಡರೆ ರೇಣುಕಾ ಸ್ವಾಮಿ ಕುಟುಂಬದವರ ನೋವು ಕಣ್ಣೆದುರಿಗೆ ಬರುತ್ತದೆ. ಆದರೆ ಇಲ್ಲಿ ಕಾರಾಗೃಹದಲ್ಲಿ ಕಾಲ ಕಳೆಯುವುದು ಅಷ್ಟು ಸುಲಭ ಅಲ್ಲ, ದರ್ಶನ್ ಗೂ ಮನೆಯವರು ಸಿನಿಮಾಗೆ ಹೂಡಿಕೆ ಮಾಡಿರುವವರು ಎನ್ನುವ ಚಿಂತೆ ಅವರಿಗೂ ಇದೆ ಎಂದು ಗದ್ಗಧಿತರಾಗಿ ಮಾತನಾಡಿದರು.