ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್‌ಕುಮಾರ್‌ಗೆ ಇಂದು 50ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆ ಚಿಕ್ಕಪ್ಪನ ಸ್ಮಾರಕಕ್ಕೆ ಯುವ ರಾಜ್‌ಕುಮಾರ್ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತದೆ ಎಂದು ಹೇಳಿದ್ದಾರೆ.
ಮೊದಲಿಗೆ ನಮ್ಮ ಚಿಕ್ಕಪ್ಪನಿಗೆ 50ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ಬೆಳಗ್ಗೆ 6 ಗಂಟೆಯಿಂದ ಸ್ಮಾರಕದ ಬಳಿ ಜನ ಸೇರಿದ್ದಾರೆ. ಇದೆಲ್ಲ ನೋಡಿದ್ರೆ ಚಿಕ್ಕಪ್ಪ ಇಲ್ಲೇ ನಮ್ಮ ಜೊತೆನೇ ಇದ್ದಾರೆ ಅನಿಸುತ್ತದೆ. ‘ಅಪ್ಪು ರೀ-ರಿಲೀಸ್‌ನಲ್ಲೂ ಅಷ್ಟೇ ಪವರ್, ಎನರ್ಜಿ, ಸೆಲೆಬ್ರೇಷನ್ ಇತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.