ಸೀಮಾ ಪ್ರೀತಿಗಾಗಿ ಭಾರತಕ್ಕೆ ಬಂದಿಲ್ಲ, ಆಕೆಗಿದೆ ಪಾಕ್‌ ಸೇನೆ ಜೊತೆ ನಂಟು: ಮೊದಲ ಪತಿಯಿಂದ ಸ್ಪೋಟಕ ಹೇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಬ್‌ ಜಿ ಗೇಮ್‌ ಆಡುವಾಗ ಪರಿಚಯವಾದ ಯುಪಿ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಸಚಿನ್‌ ಜತೆ ಇರುವ ಸೀಮಾ ಹೈದರ್‌ ಮತ್ತೆ ಸುದ್ದಿಯಲ್ಲಿದ್ದಾರೆ.

ಇದಕ್ಕೆ ಕಾರಣ ಸೀಮಾ ಹೈದರ್‌ ಮೊದಲ ಪತಿ ಗುಲಾಂ ಹೈದರ್‌ ಸೀಮಾ ಬಗ್ಗೆ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.

ಸೀಮಾ ಪ್ರೀತಿ ಪ್ರೇಮಕ್ಕಾಗಿ ಭಾರತಕ್ಕೆ ಬಂದಿಲ್ಲ. ಆಕೆಯ ಉದ್ದೇಶ ಬೇರೆಯದ್ದೇ ಇದೆ. ಆಕೆ ಮತ್ತು ಆಕೆ ಕುಟುಂಬಸ್ಥರು ಆಗಾಗ ಪಾಕಿಸ್ತಾನಕ್ಕೆ ಭೇಟಿ ಕೊಡುತ್ತಿರುತ್ತಾರೆ. ಅಲ್ಲದೇ ಅವರು ಪಾಕ್‌ ಸೇನೆ ಜೊತೆ ನಂಟು ಹೊಂದಿದ್ದಾರೆ ಎಂದು ಗುಲಾಂ ಹೇಳಿಕೆಯೊಂದನ್ನು ಕೊಟ್ಟಿದ್ದಾನೆ.

ಸೀಮಾ ಆಗಾಗ ಪಾಕಿಸ್ತಾನ ಸೇನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾಳೆ. ಆಕೆ ಚಿಕ್ಕಪ್ಪ ಗುಲಾಮ್‌ ಅಕ್ಬರ್‌ ಕೂಡ ಪಾಕ್‌ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆತನನ್ನು ಆಗಾಗ ಭೇಟಿ ಆಗುತ್ತಿರುತ್ತಾಳೆ. ಇದನ್ನೆಲ್ಲಾ ನೋಡಿದರೆ ಆಕೆ ಭಾರತಕ್ಕೆ ಹೋಗಿರುವುದು ಗೂಢಾಚಾರಿಣಿಯಾಗೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ ಎಂದು ಗುಲಾಮ್‌ ಹೇಳಿದ್ದಾನೆ.

ಸೀಮಾಗೆ ತಂತ್ರಜ್ಞಾನದ ಬಳಕೆ ಬಗ್ಗೆ ಅತೀವ ಜ್ಞಾನ ಇದೆ. ಮೊಬೈಲ್‌ ಫೋನ್‌ ಅನ್ನು ಜೋಡಿಸುವುದು, ಟಿಕ್‌ ಟಾಕ್‌ ಬ್ಯಾನ್‌ ಆದ ಮೇಲೂ ಅದನ್ನು ಬಳಸುವುದು ಹೀಗೆ ತಂತ್ರಜ್ಞಾನದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಳು. ಆದರೆ ಆಕೆಗೆ ಪಬ್‌ಜಿ ಆಟ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ಪಬ್‌ ಜಿ ಮೂಲಕ ಸಚಿನ್‌ ಪರಿಚಯ ಆಗಿದೆ ಎಂಬ ಆಕೆಯ ಹೇಳಿಕೆ ಸುಳ್ಳು ಎಂದು ಗುಲಾಮ್‌ ಹೈದರ್‌ ಹೇಳಿದ್ದಾನೆ.

2020ರಲ್ಲಿ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ಪಬ್ಜಿ ಆನ್‌ಲೈನ್‌ ಗೇಮ್‌ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್‌ ಅವರು ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ 2023ರಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್‌ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್‌, ಆಕೆಯ ನಾಲ್ಕು ಮಕ್ಕಳು, ಸಚಿನ್‌ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್‌ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್‌ ವಿಚಾರಣೆ ಕೂಡ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!