ಮಾಧ್ಯಮದಲ್ಲಿ ನೋಡಿದ್ದಾಯ್ತು, ಈಗ ಚುನಾವಣಾ ಅಖಾಡಕ್ಕೆ ಬಂದ್ರು ನೋಡಿ  AI ಆ್ಯಂಕರ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕಮ್ಯುನಿಸ್ಟ್ ಪಕ್ಷವು ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಕೃತಕ ಬುದ್ಧಿಮತ್ತೆಯ ಆ್ಯಂಕರ್ ಅನ್ನು ಸೋಮವಾರ ಅನಾವರಣಗೊಳಿಸಿದೆ. CPIM X (Twitter) ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಬಂಗಾಳದ ಏಕತೆಯ ಹೊಸ ಪ್ರಯೋಗವನ್ನು ಪ್ರಾರಂಭಿಸಿದೆ.

ಅಂದಹಾಗೆಯೇ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ಆ್ಯಂಕರ್​​ಗೆ ಸಮತಾ ಎಂದು ಕರೆಯಲಾಗುತ್ತದೆ. ಹೋಳಿ ಹಬ್ಬದಂದು ಸಮತಾ ಬಂಗಾಳಿ ಭಾಷೆಯಲ್ಲಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಎಐ ಆ್ಯಂಕರ್​ ಅನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಇದೀಗ ಪಕ್ಷ ಮುಂದಾಗಿದೆ.

ಈ ಕುರಿತು ಅಭ್ಯರ್ಥಿ ಸೃಜನ್​ ಭಟ್ಟಾಚಾರ್ಯ ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಕೃತಕ ಬುದ್ಧಿಮತ್ತೆ ಆಪರೇಟರ್ ಗಳನ್ನು ಬಳಸಿಕೊಳ್ಳಲು ಮುಂದಾಗಿದ್ದೇನೆ. ನಾವು ಯಾವಾಗಲೂ ಯಾರಿಗೂ ಹಾನಿ ಮಾಡದ ಹೊಸ ವಿಷಯಗಳನ್ನು ಹುಡುಕುತ್ತಿರುತ್ತೇವೆ ಎಂದರು.

ಇನ್ನು ಏಪ್ರಿಲ್​ 19ರಿಂದ ಪ್ರಾರಂಭವಾಗಿ ಜೂನ್​ 1ರವರೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!