ಹೊಸ ದಿಗಂತ ಡಿಜಿಟಲ್ ಡೆಸ್ಕ್
ನವೆಂಬರ್ 15ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಹೊರನಾಡ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸುದೀತಿ ಅಂಬಳೆ, ಸಹ ಅಧ್ಯಕ್ಷರಾಗಿ ನೂತನ ಕೈಕಾಡೆ ಆಯ್ಕೆಯಾಗಿದ್ದಾರೆ.
ದೆಹಲಿ, ಗುರುಗಾಂವ್ ಹಾಗೂ ಭಿವಾಡಿಯಿಂದ ಆಸಕ್ತ ಕನ್ನಡ ಮಕ್ಕಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದೆಹಲಿ ಘಟಕದ ಅಧ್ಯಕ್ಷ ಅರವಿಂದ ಬಿಜೈ ಆಯ್ಕೆಯಾದ ಹಾಗೂ ಭಾಗವಹಿಸಿದ ಮಕ್ಕಳಿಗೆ ಅಭಿನಂದನಾ ಮಾತುಗಳನ್ನಾಡಿದರು. ಶುಭಾ ದೇವಿಪ್ರಸಾದ್ ಸ್ವಾಗತಿಸಿದರು. ಪ್ರಸಾದ್ ನಾಯ್ಕ್ ವಂದಿಸಿದರು. ಸುಜಾತ ನಿಂಬಾಳ ಕಾರ್ಯಕ್ರಮ ನಿರೂಪಿಸಿದರು.