ಉಚಿತ ನಿವೇಶನ ನೀಡುವುದಾಗಿ ವಂದತಿ: ತಂಡೋಪತಂಡವಾಗಿ ಬಂದು ಸ್ಥಳ ಗುರುತಿಸಿದ ಜನತೆ!

ಹೊಸದಿಗಂತ ವರದಿ,ರಾಯಚೂರು :

ಉಚಿತ ನಿವೇಶ ದೊರೆಯುತ್ತದೆ ಎಂಬ ವದಂತಿ ನಗರದಾದ್ಯಂತ ಹರಡಿದ ಪರಿಣಾಮ ನಗರಸಭೆಗೆ ಸಂಬoಧಪಟ್ಟ ಜಾಗೆಯಲ್ಲಿ ಸಾವಿರಾರು ಜನತೆ ಇದು ತಮ್ಮ ಜಾಗೆ ಎಂದು ಗುರುತಿಸುವ ಕೆಲಸವನ್ನು ಕಳೆದ ಎರಡ್ಮೂರು ದಿನಗಳಿಂದ ತಂಡೋಪ ತಂಡವಾಗಿ ಆಗಮಿಸಿ ಮಾಡುತ್ತಿದ್ದಾರೆ.

ನಗರದ ಹೊರವಲಯದಲ್ಲಿರುವ ಚಂದ್ರಬoಡಾ ರಸ್ತೆಗೆ ಪಕ್ಕದಲ್ಲಿರುವ ವಾರ್ಡ್ ನಂಬರ್ ೨೮ರ ಆಶ್ರಯ ಕಾಲೋನಿಗೆ ಹೊಂದಿಕೊoಡಿರುವ ನಗರಸಭಾ ಆಸ್ತಿಯಲ್ಲಿ ಜನತೆ ಈ ಕೆಲಸಕ್ಕೆ ಮುಂದಾಗುತ್ತಿದ್ದಾರೆ.

ಈ ಜಾಗೆಯಲ್ಲಿ ಸರ್ಕಾರ ಉಚಿತವಾಗಿ ನಿವೇಶನ ನೀಡುತ್ತದೆ. ನಿಮಗೆ ಇಷ್ಟ ಬಂದೆಡೆ ಜಾಗೆಯನ್ನು ಗುರುತಿಸಿಕೊಳ್ಳಿ ಎಂಬ ವದ್ದಂತಿ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಾಡ್ಚಿನಂತೆ ಹರಡಿದ್ದೆ ತಡ ಜನತೆ ತಮ್ಮ ಜಾಗೆಯನ್ನು ಗುರುತಿಸಿಕೊಳ್ಳುವುದಕ್ಕೆ ನಾಮುಂದು ತಾಮುಂದು ಎಂದು ಧಾವಿಸುತ್ತಿದ್ದಾರೆ.

ಇಗಾಗಲೆ ನೂರಾರು ಎಕರೆ ಪ್ರದೇಶದಲ್ಲಿ (ಗುಡ್ಡ, ಬೆಟ್ಟಗಳಲ್ಲಿಯೂ) ಜನ ಮಕ್ಕಳು, ಮಹಿಳೆಯರು, ವೃದ್ಧರೆನ್ನದೇ ಬೆಟ್ಟಕ್ಕೆ ಸಾವಿರಾರು ಜನತೆ ಆಗಮಿಸಿ ಇದು ತಮ್ಮ ಜಾಗೆ ಎಂದು ಕಟ್ಟಿಗೆಯ ಗಳಗಳನ್ನು ಹುಗಿದು ಅದಕ್ಕೆ ಬಟ್ಟೆ, ರಿಬ್ಬನ್, ದಾರ ಸೇರಿದಂತೆ ಇತರೆ ವಸ್ತುಗಳಿಂದ ಕಟ್ಟಿದ್ದಾರೆ. ಇನ್ನು ಕೆಲವರು ಬಣ್ಣಗಳಿಂದ ಹೆಸರನ್ನು ಬರೆದು ಗುರ್ತು ಹಾಕಿದ್ದಾರೆ.

ಹೀಗೆ ಕಳೆದ ಎರಡ್ಮೂರು ದಿನಗಳಿಂದ ಒಬ್ಬರನ್ನ ನೋಡಿ ಮತ್ತೊಬ್ಬರು ಎಂಬoತೆ ಬೆಟ್ಟಕ್ಕೆ ಬರ್ತಿದ್ದಾರೆ. ಇಡೀ ಬೆಟ್ಟದ ಸುತ್ತಲೂ ಜನ ಬಂದು ಖಾಲಿ ಸ್ಥಳಗಳನ್ನ ಹುಡುಕಿ ಅದು ತಮ್ಮದು ಅಂತ ಗುರ್ತು ಮಾಡ್ತಿದ್ದಾರೆ.

ಇದು ಉಚಿತ ನಿವೇಶನಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು ಯಾರು ಸೈಟ್ ಕೊಡುತ್ತಾರೆ, ಉಚಿತವಾಗಿ ಹೇಗೆ ಕೊಡುತ್ತಾರೆ ಅನ್ನೋದು ಯಾರಿಗೂ ಸ್ಪಷ್ಟತೆ ಇಲ್ಲ. ಕೆಲವರು ಸ್ಥಳೀಯ ಕೌನ್ಸಲರ್ ಕೊಡಿಸ್ತಾರೆ ಅಂದ್ರೆ ಇನ್ನು ಕೆಲವರು ನಗರ ಶಾಸಕರು ಉಚಿತ ಸೈಟ್ ಕೊಡಿಸ್ತಿನಿ ಅಂದಿದ್ದಾರೆ ಅನ್ನುತ್ತಾರೆ. ಮತ್ತೆ ಕೆಲವರು ನಮಗೆ ಗೊತ್ತಿಲ್ಲ ಹೀಗೆ ಎಲ್ಲರೂ ಬಂದು ಸೈಟ್ ಹುಡುಕ್ತಿದ್ದಾರೆ ಅದಕ್ಕೆ ನಾವು ಬಂದಿದ್ದೀವಿ ಅಂತಾರೆ ಎಂದು ಅಲ್ಲಿದ್ದ ಜನತೆ ಪತ್ರಿಕೆಗೆ ತಿಳಿಸಿದರು.

ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ನಗರಸಭೆ ಆಡಳಿತ ಅತೀಕ್ರಮಣ ಮಾಡಲಾಗಿದ್ದ ಸ್ಥಳದಲ್ಲಿ ಕೆಲವನ್ನು ತೆರವುಗೊಳಿಸಿದ್ದಾರೆ. ಸರ್ವೆ ನಂಬರ್ ೫೫೯ ರ ೧೦ ಎಕರೆ ೩೮ ಗುಂಟೆ ಜಾಗ ಅದು. ಅತೀಕ್ರಮಣ ಮಾಡಿದ್ದನ್ನ ತೆರವುಗೊಳಿಸಲಾಗಿದೆ. ಆರ್‌ಓ ನೇತೃತ್ವದ ಐದು ಜನರ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದಾರೆ ಪೌರಾಯುಕ್ತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!