ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಹಾಲು ಮಾರಾಟ: KMFನಿಂದ ಖಡಕ್ ಎಚ್ಚರಿಕೆ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ನಂದಿನಿ ಹಾಲಿನ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜನರು ಪರದಾಡುವಂತಾಗಿದೆ. ಇದೇ ವೇಳೆ ನಂದಿನಿ ಉತ್ಪನ್ನಗಳ ಮಾರಾಟಗಾರರು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಹಾಲನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳೂ ಇವೆ. ಈ ಬಗ್ಗೆ ಕೆಎಂಎಫ್ ನಂದಿನಿ ಡೀಲರ್ ಗಳಿಗೆ ಎಚ್ಚರಿಕೆ ನೀಡಿದೆ.

ಹಿಂದೆ 22 ರೂಪಾಯಿ ಇದ್ದ ನಂದಿನಿ 500 ಮಿಲಿ ಈಗ 550 ಮಿಲಿ ಪ್ಯಾಕ್‌ಗಳಲ್ಲಿ ಲಭ್ಯವಿದೆ, ಪ್ರತಿ ಪ್ಯಾಕ್‌ಗೆ 50 ಮಿಲಿ ಹೆಚ್ಚುವರಿ ಹಾಲು 24 ರೂ. ಆಗಿದ್ದು ಗ್ರಾಹಕರ ಕೋಪಕ್ಕೆ ಕಾರಣವಾಗಿತ್ತು.

ಸದ್ಯ ನಂದಿನಿ ಹಾಲು ಅಧಿಕೃತ ಮಳಿಗೆಯಲ್ಲಿ ಮಾತ್ರವಲ್ಲದೆ ಇತರೆ ಮಳಿಗೆಗಳಲ್ಲೂ ಮಾರಾಟವಾಗುತ್ತಿದೆ. ಕೆಲವು ನಂದಿನಿ ಡೀಲರ್‌ಗಳು ಮಾತ್ರವಲ್ಲದೆ ಅನೇಕ ಡೀಲರ್‌ಗಳು ಸಹ ಬೆಳಗಿನ ಸಮಯವನ್ನು ಹೊರತುಪಡಿಸಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಯನ್ನು ನೀಡುತ್ತಿರುವ ಬಗ್ಗೆ ಗ್ರಾಹಕರು ದೂರಿದ್ದಾರೆ. ಈ ಸಮಸ್ಯೆಗೆ ಕಡಿವಾಣ ಹಾಕಿ ಗ್ರಾಹಕರಿಂದ ಹೆಚ್ಚಿನ ಹಣ ಕೇಳುವುದನ್ನು ನಿಲ್ಲಿಸಲು ಕೆಎಂಎಫ್ ನಿರ್ಧರಿಸಿದೆ.

ಎಂಆರ್‌ಪಿ ಮೀರಿದ ಶುಲ್ಕದ ಬಗ್ಗೆ ಗ್ರಾಹಕರು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೆಎಂಎಫ್ ಪರವಾನಿಗೆ ರದ್ದುಪಡಿಸುವುದಾಗಿ ಎಚ್ಚರಿಕೆ ಸಂದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!