ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೇಮಿಗಳ ದಿನದಂದು ಗುಲಾಬಿ ಹೂವುಗಳಿಗೆ ಭಾರೀ ಬೇಡಿಕೆ ಇತ್ತು. ಈ ಸಂದರ್ಭದಲ್ಲಿ ಹೂವು ಮಾರಾಟಗಾರರು ಗುಲಾಬಿಯನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಬೊಕ್ಕೆಯಂತೆ ಮಾಡಿ ಮಾರಾಟ ಮಾಡಿದ್ದಾರೆ.
ಈ ಹೂವಿನ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್ ನೀಡಿದ್ದು, ಬರೋಬ್ಬರಿ 2.46 ಲಕ್ಷ ರೂಪಾಯಿ ವಸೂಲಿ ಮಾಡಿದೆ.
ಹಲವು ಬಗೆಯ ಹೂವುಗಳನ್ನು ಬೇರೆ ಬೇರೆ ದೇಶಗಳಿಗೂ ರಫ್ತು ಮಾಡಲಾಗಿದೆ. ಹೊಸ ವರ್ಷದಿಂದ ವ್ಯಾಲೆಂಟೈನ್ಸ್‌ಡೇವರೆಗೂ ಹೂವುಗಳಿಗೆ ಭಾರೀ ಬೇಡಿಕೆ ಇರುತ್ತದೆ. ತದನಂತರ ಮದುವೆ ಮನೆಗಳು, ಶುಭ ಸಮಾರಂಭಗಳಿಗೆ ಮಾತ್ರ ಹೂವುಗಳನ್ನು ಬಳಸಲಾಗುತ್ತದೆ. ಹೂವು ಬಾಡಿದ ನಂತರ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಲಾಗುತ್ತದೆ. ಇದರ ಜೊತೆಗೆ ಪ್ಲಾಸ್ಟಿಕ್ ನಿಷೇಧವಿದ್ದರೂ ಮಾರಾಟ ಮಾಡಿದ ಮಾರಾಟಗಾರರಿಗೆ ಘನತ್ಯಾಜ್ಯ ವಿಭಾಗದಿಂದ ದಂಡ ವಿಧಿಸಲಾಗಿದೆ.