ಪ್ರವಾಸಕ್ಕೆ ತೆರಳಿದ್ದ ವೈದ್ಯರು: ಭೀಕರ ಅಪಘಾತದಲ್ಲಿ ಐವರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಬಿಕೆನರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ವೈದ್ಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದುರ್ಘಟನೆಯಲ್ಲಿ 18 ತಿಂಗಳ ಮಗು ಕೂಡ ಮೃತಪಟ್ಟಿದೆ. ಬಿಕೆನರ್‌ನ ಭರತ್ಮಲಾ ಹೈವೇನಲ್ಲಿ ಎಸ್‌ಯುವಿ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಗುಜರಾತ್ ಕಚ್ ನಿವಾಸಿಗಳಾದ ನಾಲ್ವರು ವೈದ್ಯರು ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.

ಡಾ. ಪ್ರತೀಕ್, ಪತ್ನಿ ಡಾ. ಹೇತಲ್ ಇವರ 18 ತಿಂಗಳ ಮಗು, ಡಾ. ಕರಣ್ ಹಾಗೂ ಪತ್ನಿ ಡಾ.ಪೂಜಾ ಮೃತರು. ಗುಜರಾತ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಈ ನಾಲ್ವರು ವೈದ್ಯರು ಸೇವೆ ಸಲ್ಲಿಸುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!