ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾರಪೇಟೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ತಾನಾಜಿರಾವ್ (73) ಅವರು ಇಂದು ಮಧ್ಯಾಹ್ನ ಬೆಂಗಳೂರಿನ ತಮ್ಮ ಸಂಜಯನಗರದ ನಿವಾಸ ದಲ್ಲಿ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ.
ರಾ.ಸ್ವ. ಸಂಘದ ಬಂಗಾರಪೇಟೆ ತಾ. ಕಾರ್ಯವಾಹ, ಕೋಲಾರ ಜಿಲ್ಲಾ ಹಾಗೂ ತುಮಕೂರು ವಿಭಾಗ ಸೇವಾ ಪ್ರಮುಖರಾಗಿ ಕಾರ್ಯ ನಿರ್ವಹಿಸಿ ಅನೇಕ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದ್ದರು.