ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ಯುದ್ಧದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಹಿರಿಯ ಅಧಿಕಾರಿ ಮೃತಪಟ್ಟಿದ್ದಾರೆ.
ಮೃತ ಅಧಿಕಾರಿಯನ್ನು ಡ್ರೂಜ್ ಸಮುದಾಯದ ಅರಬ್ ಲೆಫ್ಟಿನೆಂಟ್ ಕರ್ನಲ್ ಸಲ್ಮಾನ್ ಹಬಾಕಾ (33) ಎಂದು ಗುರುತಿಸಲಾಗಿದೆ.
188ನೇ ಶಸ್ತ್ರಸಜ್ಜಿತ ಬ್ರಿಗೇಡ್ನ 53ನೇ ಬೆಟಾಲಿಯನ್ಗೆ ಸೇರಿದ ಸಲ್ಮಾನ್, ಹಮಾಸ್ ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದರು.
ಅಕ್ಟೋಬರ್ 7 ರ ಹಠಾತ್ ದಾಳಿಯಲ್ಲಿ ಹಮಾಸ್ ಇಟ್ಟುಕೊಂಡಿರುವ ಒತ್ತೆಯಾಳುಗಳನ್ನು ಪತ್ತೆಹಚ್ಚಲು ಐಡಿಎಫ್ ಮುಂದುವರಿಯುತ್ತಿದ್ದಂತೆ ಗಾಝಾ ಪಟ್ಟಿಯ ವಿವಿಧ ಭಾಗಗಳಲ್ಲಿ ತೀವ್ರ ಹೋರಾಟ ನಡೆಯುತ್ತಿದೆ ಎಂದು ಇಸ್ರೇಲ್ ಪಡೆಗಳು ವರದಿ ಮಾಡಿವೆ.
ಘಟನೆಯಲ್ಲಿ ಹಲವಾರು ಸೈನಿಕರು ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ, ಹಮಾಸ್ ಬಂದೂಕುಧಾರಿಗಳೊಂದಿಗೆ ರಾತ್ರಿಯಿಡೀ ನಡೆದ ಘರ್ಷಣೆಯಲ್ಲಿ 679 ನೇ ಯಿಫ್ತಾ ಬ್ರಿಗೇಡ್ ನ ಮೀಸಲು ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.