Sunday, December 3, 2023

Latest Posts

ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 71 ಲಕ್ಷಕ್ಕೂ ಹೆಚ್ಚು Whatsapp ಖಾತೆ ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಾಟ್ಸ್​ಆಯಪ್ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ದಾಖಲೆಯ 71 ಲಕ್ಷಕ್ಕೂ ಹೆಚ್ಚು ದುರುದ್ದೇಶಪೂರಿತ ಖಾತೆಗಳನ್ನು ನಿಷೇಧಿಸಿದೆ.

ಸೆಪ್ಟೆಂಬರ್ 1 ರಿಂದ 30 ರ ನಡುವೆ ಕಂಪನಿಯು 71 ಲಕ್ಷ 11 ಸಾವಿರ ಖಾತೆಗಳನ್ನು ನಿರ್ಬಂಧಿಸಿದೆ.ಹೊಸ ಐಟಿ ನಿಯಮಗಳು 2021 ಕ್ಕೆ ಅನುಸಾರವಾಗಿ ವಾಟ್ಸ್​ಆಯಪ್ ಈ ಕ್ರಮ ಕೈಗೊಂಡಿದೆ.
ತನ್ನ ಮಾಸಿಕ ಅನುಸರಣಾ ವರದಿಯಲ್ಲಿ ವಾಟ್ಸ್​ಆಯಪ್, ಬಳಕೆದಾರರಿಂದ ಯಾವುದೇ ದೂರು ಬರುವ ಮೊದಲು ಈ ಖಾತೆಗಳ ಪೈಕಿ ಸುಮಾರು 25,71,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

ದೇಶದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್​ಪಾರ್ಮ್ ಆಗಿರುವ ವಾಟ್ಸ್​ ಆಯಪ್ ದೇಶದಲ್ಲಿ ಸೆಪ್ಟೆಂಬರ್​ನಲ್ಲಿ ದಾಖಲೆಯ 10,442 ದೂರು ವರದಿಗಳನ್ನು ಸ್ವೀಕರಿಸಿದೆ ಮತ್ತು ಇದರಲ್ಲಿ 85 ರಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಅಕೌಂಟ್ಸ್ ಆಕ್ಷನ್ಡ್ ಎಂಬುದು ವರದಿಯ ಆಧಾರದ ಮೇಲೆ ವಾಟ್ಸ್​ ಆಯಪ್ ಪರಿಹಾರ ಕ್ರಮಗಳನ್ನು ತೆಗೆದುಕೊಂಡ ವರದಿಗಳನ್ನು ಸೂಚಿಸುತ್ತದೆ ಮತ್ತು ಕ್ರಮ ತೆಗೆದುಕೊಳ್ಳುವುದು ಖಾತೆಯನ್ನು ನಿಷೇಧಿಸುವುದನ್ನು ಅಥವಾ ಅದರ ಪರಿಣಾಮವಾಗಿ ಈ ಹಿಂದೆ ನಿಷೇಧಿಸಲಾದ ಖಾತೆಯನ್ನು ಪುನಃಸ್ಥಾಪಿಸುವುದನ್ನು ಸೂಚಿಸುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!