August 31, 2026
Monday, August 31, 2026
spot_img

ಭೀಕರ ಅಗ್ನಿ ಅವಘಡ: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, 12 ಜಾನುವಾರುಗಳು ಸಜೀವ ದಹನ!

ಹೊಸದಿಗಂತ ವರದಿ ಧಾರವಾಡ:

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡವೊಂದು ಸಂಭವಿಸಿದ್ದು, ಕೊಟ್ಟಿಗೆಯಲ್ಲಿದ್ದ 12 ಜಾನುವಾರುಗಳು ಸಜೀವ ದಹನವಾಗಿರುವ ಘಟನೆ ಗುರುವಾರ ನಡೆದಿದೆ.

ಗ್ರಾಮದ ನಿವಾಸಿಗಳಾದ ಸಾಗರ ಅಸುಂಡಿ ಹಾಗೂ ಧರಣೇಂದ್ರ ಅಸುಂಡಿ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಇಡೀ ಕೊಟ್ಟಿಗೆಯನ್ನು ಆವರಿಸಿಕೊಂಡಿದೆ. ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಹೊರಬರಲಾಗದೆ ಸಾವನ್ನಪ್ಪಿವೆ.

ಭಾರೀ ಪ್ರಮಾಣದ ಹಾನಿ:

 ಬೆಂಕಿ ಅವಘಡದಲ್ಲಿ ಧರಣೇಂದ್ರ ಅಸುಂಡಿ ಅವರಿಗೆ ಸೇರಿದ 2 ಆಕಳು, 3 ಎಮ್ಮೆ, 2 ಆಕಳ ಕರುಗಳು ಹಾಗೂ ಸಾಗರ ಅಸುಂಡಿ ಅವರಿಗೆ ಸೇರಿದ 3 ಎಮ್ಮೆ,2 ಎಮ್ಮೆ ಕರುಗಳು ಸೇರಿದಂತೆ ಒಟ್ಟು 12 ಜಾನುವಾರುಗಳು ಮೃತಪಟ್ಟಿವೆ.

ಉಳಿದಂತೆ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ 4 ಟ್ರ್ಯಾಕ್ಟರ್ ಮೇವು ಹಾಗೂ ಎರಡು ದನದ ಕೊಟ್ಟಿಗೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ರೈತರು ಕಣ್ಣೀರಡುತ್ತಿದ್ದಾರೆ.

ಇದನ್ನೂ ಓದಿ:

ಘಟನಾ ಸ್ಥಳಕ್ಕೆ ಧಾರವಾಡ ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಅಂದಾಜು ಮಾಡುತ್ತಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !