ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ವಿದ್ವಾಂಸ ಹಾಗೂ ಸುಪ್ರೀಂ ಕೋರ್ಟ್‌ನ ಮಾಜಿ ವಕೀಲ ಎಜಿ ನೂರಾನಿ (93) ನಿಧನರಾಗಿದ್ದಾರೆ.
ರಾಜಕೀಯ ವಿಮರ್ಶಕ ಅಬ್ದುಲ್ ಗಪೂರ್ ನೂರಾನಿ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.
ನೂರಾನಿ ಅವರು ಕಾನೂನು, ಇತಿಹಾಸ ಮತ್ತು ರಾಜ್ಯಶಾಸ್ತ್ರ ಕ್ಷೇತ್ರಗಳಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದರು. ಅವರ ಒಳನೋಟವುಳ್ಳ ಅಂಕಣಗಳು ಮತ್ತು ಪುಸ್ತಕಗಳು ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳಿಗೆ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
ನೂರಾನಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬ ಮತ್ತು ಆತ್ಮೀಯರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಹೇಳಿದ್ದಾರೆ.