October 11, 2026
Sunday, October 11, 2026
spot_img

ತೀವ್ರ ಅನಾರೋಗ್ಯ : ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೀವ್ರ ಅನಾರೋಗ್ಯದಿಂದಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರ ನಿಗಾ ಘಟಕದಲ್ಲಿ ಅಣ್ಣಾ ಹಜಾರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದ ರಾಲೇಗನ್‌ ಸಿದ್ಧಿ ಬಳಿಯ ಸ್ಥಳೀಯರ ಆಸ್ಪತ್ರೆಯಲ್ಲಿ ಅಣ್ಣಾ ಹಜಾರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆರೋಗ್ಯ ಮತ್ತೂ ಕ್ಷೀಣಿಸಿದೆ. ತಕ್ಷಣವೇ ಅವರನ್ನು ಮುಂಬೈನ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.

ತೀವ್ರ ನಿರ್ಜಲೀಕರಣ ಹಾಗೂ ವೈರಲ್‌ ಸೋಂಕು ತಗುಲಿದ್ದ ಕಾರಣ ಅವರ ಆರೋಗ್ಯ ಹದಗೆಟ್ಟಿತ್ತು. ಸಿದ್ಧಿಯ ಬಳಿ ಆಸ್ಪತ್ರೆಯಲ್ಲಿದ್ದ ಅವರನ್ನು ಮುಂಬೈಗೆ ಶಿಫ್ಟ್‌ ಮಾಡಲಾಗಿದ್ದು, ಸದ್ಯ ಡಾ. ಗೌತಮ್‌ ಬನ್ಸಾಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಅವರ ಆರೋಗ್ಯದ ಬಗ್ಗೆ ನಿಗಾ ಇಟ್ಟಿದ್ದೇವೆ. ಒಮ್ಮೆ ಸ್ಟೇಬಲ್‌ ಆದ ನಂತರ ಚಿಕಿತ್ಸೆಯ ಕೋರ್ಸ್‌ ನಿರ್ಧರಿಸುತ್ತೇವೆ. ಈಗ ಇದಕ್ಕಿಂತ ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ರಾಲೆಗಾನ್‌ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಅವರ ಆರೋಗ್ಯದ ಸುದ್ದಿ ಕೇಳಿ ಅನುಯಾಯಿಗಳು ಆತಂಕದಲ್ಲಿದ್ದಾರೆ. ದಶಕಗಳಿಂದ ಇದೇ ಸ್ಥಳದಲ್ಲಿ ವಾಸಿಸುತ್ತಿದ್ದ ಅಣ್ಣಾ ಹಜಾರೆಯವರ ಆರೋಗ್ಯ ಬೇಗ ಸ್ಥಿರವಾಗಲಿ ಎಂದು ಸ್ಥಳೀಯರು ಹೇಳಿದ್ದಾರೆ. ಸುಮಾರು 15 ವರ್ಷಗಳಿಂದಲೂ ಭ್ರಷ್ಟಾಚಾರ ವಿರೋಧಿ ಭಾರತ ಆಂದೋಲನ ಹಾಗೂ ಸರಣಿ ಉಪವಾಸ ಸತ್ಯಾಗ್ರಹಗಳನ್ನು ಅಣ್ಣಾ ಹಜಾರೆ ಕೈಗೊಂಡಿದ್ದರು. ರಾಜಕೀಯ ಪಕ್ಷಗಳಲ್ಲಿ ನಡುಕ ಹುಟ್ಟಿಸುವಷ್ಟು ಬಲ, ಸ್ಥಿರತೆ ಅವರಲ್ಲಿತ್ತು. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮಾಡಿದ್ದ ಕಾಕ್ರೋಕ್‌ ಜನತಾ ಪಾರ್ಟಿ ನೇತೃತ್ವದ ಜಂತರ್‌ ಮಂತರ್‌ ಪ್ರತಿಭಟನೆಗೆ ಹಜಾರೆ ಬೆಂಬಲ ನೀಡಿದ್ದರು.

Must Read