200 ಪಾಯಿಂಟ್‌ ಕುಸಿದ ಸೆನ್ಸೆಕ್ಸ್:‌ ಹೇಗಿದೆ ಷೇರುಪೇಟೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ ಸಬೆಯ ಫಲಿಂತಾಶಕ್ಕೆ ಮುಂಚಿತವಾಗಿ ಷೇರುಪೇಟೆಯು ನೀರಸವಾಗಿ ಆರಂಭವಾಗಿದ್ದು ಎನ್‌ಎಸ್‌ಇ ನಿಫ್ಟಿ 50ಯು 40 ಪಾಯಿಂಟ್‌ ಗಳಿಗಿಂತ ಹೆಚ್ಚು ಕುಸಿದು 17,800 ಮಟ್ಟಕ್ಕಿಂತ ಕೆಳಗೆ ವಹಿವಾಟು ನಡೆಸಿತು ಮತ್ತು ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 200 ಪಾಯಿಂಟ್‌ಗಳನ್ನು ಕಳೆದುಕೊಂಡು 56,200 ನಲ್ಲಿ ವಹಿವಾಟು ನಡೆಸಿತು.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ತಲಾ ಶೇಕಡಾ 0.1 ರಷ್ಟು ಕುಸಿದಿದ್ದರಿಂದ ವಿಶಾಲ ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿವೆ. ವಲಯವಾರು, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಫಾರ್ಮಾ ಸೂಚ್ಯಂಕಗಳು ಅಲ್ಪ ಗಳಿಕೆಯೊಂದಿಗೆ ಮುಂದುವರಿದರೆ, ನಿಫ್ಟಿ ರಿಯಾಲ್ಟಿ, ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಆಟೋ ಸೂಚ್ಯಂಕಗಳು ಆರಂಭಿಕ ವಹಿವಾಟಿನಲ್ಲಿ ಮುಳುಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!