ಸೆನ್ಸೆಕ್ಸ್‌ 100 ಅಂಕ ಕುಸಿತ: ದುರ್ಬಲವಾಗಿ ತೆರೆದ ಷೇರು ಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಗುರುವಾರ ದುರ್ಬಲವಾಗಿ ತೆರೆದಿವೆ. ಬಿಎಸ್‌ಇ ಸೆನ್ಸೆಕ್ಸ್ 100 ಅಂಕ ಕುಸಿದು 55,305ಕ್ಕೆ ತಲುಪಿದರೆ ಎನ್‌ಎಸ್‌ಇ ನಿಫ್ಟಿ 30 ಅಂಕ ಕುಸಿದು 16,490ಕ್ಕೆ ತಲುಪಿದೆ.

ಈ ನಡುವೆ ವಿಶಾಲ ಮಾರುಕಟ್ಟೆಗಳು, ಹಸಿರು ಬಣ್ಣದಲ್ಲಿ ತೆರೆಯಲ್ಪಟ್ಟವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.17 ರಷ್ಟು ಹೆಚ್ಚಾಗಿದೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್:
ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಎಂ & ಎಂ, ಮಾರುತಿ ಮತ್ತು ಭಾರ್ತಿ ಏರ್‌ಟೆಲ್ ಸೆನ್ಸೆಕ್ಸ್‌ನಲ್ಲಿ ಟಾಪ್ ಗೇನರ್ ಆಗಿವೆ.

ವಿಪ್ರೋ, ಎಲ್ & ಟಿ, ಕೋಟಕ್ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್ ಮತ್ತು ಏಷ್ಯನ್ ಪೇಂಟ್ಸ್ ಶೇಕಡಾ 1.8 ರಷ್ಟು ಕುಸಿದಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!