59014.98 ಕ್ಕೆ ಇಳಿದ ಸೆನ್ಸೆಕ್ಸ್:‌ ಇಂದಿನ ಷೇರುಪೇಟೆ ಹೇಗಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಿಶ್ರ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಇಕ್ವಿಟಿ ಮಾರುಕಟ್ಟೆಗಳು ಚಂಚಲವಾಗಿ ತೆರೆದಿದ್ದು ಸೆನ್ಸೆಕ್ಸ್ 16.32 ಪಾಯಿಂಟ್ ಅಂದರೆ 0.03 ಶೇಕಡಾ ಇಳಿದು 59014.98 ಕ್ಕೆ ಇಳಿದಿದೆ ಮತ್ತು ನಿಫ್ಟಿ 2.20 ಪಾಯಿಂಟ್ ಅಥವಾ 0.01 ರಷ್ಟು ಏರಿಕೆಯಾಗಿ 17579.70 ಕ್ಕೆ ತಲುಪಿದೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್:

ಇಂಡಸ್‌ಇಂಡ್ ಬ್ಯಾಂಕ್, ಐಟಿಸಿ, ಸನ್ ಫಾರ್ಮಾ, ಟಿಸಿಎಸ್ ಬೆಂಚ್‌ಮಾರ್ಕ್ ಸೂಚ್ಯಂಕಗಳಲ್ಲಿ ಲಾಭ ಗಳಿಸಿವೆ.

ಭಾರ್ತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಮಾರುತಿ ಷೇರುಗಳು ತುಸು ಕುಸಿತ ಕಂಡಿವೆ.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇಕಡಾ 0.5 ರಷ್ಟು ಏರಿಕೆಯಾಗಿರುವುದರಿಂದ ವಿಶಾಲ ಮಾರುಕಟ್ಟೆಗಳು ವ್ಯಾಪಾರದಲ್ಲಿ ಮುನ್ನಡೆ ಕಂಡಿವೆ.

ವಲಯವಾರು, ನಿಫ್ಟಿ ಮೀಡಿಯಾ ಮತ್ತು ನಿಫ್ಟಿ ರಿಯಾಲ್ಟಿ ಅಲ್ಪ ಲಾಭದೊಂದಿಗೆ ತೆರೆದಿವೆ. ನಿಫ್ಟಿ ಆಟೋ ಮತ್ತು ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್ ತುಸು ನಷ್ಟದೊಂದಿಗೆ ಪ್ರಾರಂಭವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!