ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳಲ್ಲಿ ಏರಿಕೆಯಾಗಿದ್ದು ಇಂದಿನ ಷೇರು ಪೇಟೆಯಲ್ಲಿ ಲವಲವಿಕೆ ಮೂಡಿದೆ. ರಾತ್ರಿ ಯುಎಸ್ ಮತ್ತು ಏಷ್ಯನ್ ಮಾರುಕಟ್ಟೆಗಳಲ್ಲಿ ನಡೆದ ಬದಲಾವಣೆಗಳೂ ಕೂಡ ಇದಕ್ಕೆ ಕಾರಣೀಕರ್ತವಾಗಿವೆ. ಬೆಳಿಗ್ಗೆ 09:16 ಕ್ಕೆ ಸೆನ್ಸೆಕ್ಸ್ 526.66 ಪಾಯಿಂಟ್‌ಗಳು ಅಥವಾ 1.01 ಶೇಕಡಾ 52792.38 ಕ್ಕೆ ಏರಿದ್ದು ಮತ್ತು ನಿಫ್ಟಿ 163.50 ಪಾಯಿಂಟ್ ಅಥವಾ 1.05 ರಷ್ಟು ಏರಿಕೆಯಾಗಿ 15720.20 ಕ್ಕೆ ತಲುಪಿದೆ. ಎರಡೂ ಸೂಚ್ಯಂಕಗಳಲ್ಲಿ ಅಪ್ ಟ್ರೆಂಡ್ ಮುಂದುವರೆದಿದೆ.
ಟಾಪ್ ಗೇನರ್ಸ್:
ಇನ್ಫೋ ಎಡ್ಜ್, ಡಾಲ್ಮಿಯಾ ಸಿಮೆಂಟ್ ಇಂಡಿಯಾ ಮಾರ್ಟ್ ಇಂಟರ್, ಇಂಡಸ್ ಲ್ಯಾಂಡ್ ಬ್ಯಾಂಕ್, ಡಿಕ್ಸೋನ್ ಟೆಕ್ನಾಲಜಿಗಳು ಟಾಪ್ ಗಳಿಕೆದಾರರ ಸಾಲಿನಲ್ಲಿ ಅಗ್ರ ಸ್ಥಾನದಲ್ಲವೆ.
ಟಾಪ್ ಲೂಸರ್ಸ್:
ಪರ್ಸಿಸ್ಟಂಟ್, ಕಾಫ್ರಾಜ್ ಲಿಮಿಟೆಡ್, ಎಚ್‌ಪಿಸಿಎಲ್, ಡೆಲ್ಟಾ ಕಾರ್ಪ್ ಗಳು ನಷ್ಟವನ್ನು ಅನುಭವಿಸಿವೆ.