50ಪಾಯಿಂಟ್‌ ಏರಿದ ಸೆನ್ಸೆಕ್ಸ್:‌ ಹೇಗಿದೆ ಇಂದಿನ ಶೇರ್‌ ಮಾರ್ಕೆಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಬುಧವಾರ ಬೆಳಿಗ್ಗೆ ಬೆಂಚ್ಮಾರ್ಕ್‌ ಸೂಚ್ಯಂಕಗಳಾದ ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 50 ಪಾಯಿಂಟ್‌ ಏರಿಕೆಯಾಗಿ 59,707 ಮಟ್ಟಕ್ಕೆ ತಲುಪಿದರೆ ನಿಫ್ಟಿ 50ಯು 17,800 ಮಟ್ಟದಲ್ಲಿ ವಹಿವಾಟು ಆರಂಭಿಸಿವೆ.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100ಗಳೂ ಕೂಡ ಶೇಕಡ 0.4 ಕ್ಕೆ ಏರಿದ್ದರಿಂದ ವಿಶಾಲ ಮಾರುಕಟ್ಟೆಗಳು ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನು ಮೀರಿಸಿದೆ.

ನಿಫ್ಟಿ ಆಟೋ, ನಿಫ್ಟಿ ಫಾರ್ಮಾ, ನಿಫ್ಟಿ ಎಫ್‌ಎಂಸಿಜಿ ಸೂಚ್ಯಂಕಗಳು ಅಲ್ಪ ಲಾಭದೊಂದಿಗೆ ಆರಂಭವಾದವು. ಮತ್ತೊಂದೆಡೆ, ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ರಿಯಾಲ್ಟಿ ಸೂಚ್ಯಂಕಗಳು ನಷ್ಟ ಕಂಡಿವೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್‌ 
ನೆಸ್ಲೆ ಇಂಡಿಯಾ, L&T, M&M, ಟಾಟಾ ಸ್ಟೀಲ್ ಶೇರುಗಳು ಲಾಭವನ್ನು ಗಳಿಸಿವೆ.

ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಟಿಸಿಎಸ್, ಎಚ್‌ಡಿಎಫ್‌ಸಿ ಗಳು ನಷ್ಟ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!