ಹೊಸದಿಗಂತ ವರದಿ,ಬನವಾಸಿ:
ಬೆಲೆ ಬಾಳುವ ಸಾಗುವಾನಿ ಮರಗಳ್ಳತನ ಮಾಡಿದ ಇಬ್ಬರನ್ನು ಬಂಧಿಸಿದ ಘಟನೆ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಜರುಗಿದೆ.
ಇತ್ತೀಚೆಗೆ ಸಾಂತೋಳ್ಳಿ ಗ್ರಾಮದ ಸೋಮಶೇಖರ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು 25-30 ವರ್ಷದ ಹಳೆಯ ಸಾಗವಾನಿ ಮರವನ್ನು ಕತ್ತರಿಸಿ
ಕಳುವು ಮಾಡಿಕೊಂಡು ಹೋಗಿದ್ದ ಕುರಿತು ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಪೋಲಿಸರು ಒಂದು ತಂಡವನ್ನು ರಚಿಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮಾಪೂರ ಹೆಬ್ಬತ್ತಿ ಗ್ರಾಮದ ಅರ್ಜುನ ತಿಪ್ಪಣ್ಣ ಶೀರ್ಶೆಕರ, ಪರಶುರಾಮಾ ತಿಪ್ಪಣ್ಣ ಶೀರ್ಶೆಕರ ಬಂಧಿತರಾಗಿದ್ದಾರೆ. ಬಂಧಿತರಿಂದ ಕಳ್ಳತನವಾದ ಸುಮಾರು 1,40,000 ರೂ. ಮೌಲ್ಯದ ಸಾಗುವಾನಿ ತುಂಡು, ಕೃತ್ಯಕ್ಕೆ ಬಳಸಿದ ಟ್ರ್ಯಾಕ್ಟರ್ ನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಶಿರಸಿ ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಚಂದ್ರಕಲಾ ಪತ್ತಾರ, ಸುನೀಲ್‌ಕುಮಾರ್ ಬಿ.ವೈ, ಸಿಬ್ಬಂದಿಗಳಾದ ಚಂದ್ರಪ್ಪ ಕೊರವರ, ಅನ್ಸಾರಿ, ಶಿವರಾಜ ಎಸ್, ಬಸವರಾಜ ಜಾಡರ್, ಜಗದೀಶ.ಕೆ, ಕಲ್ಲಪ್ಪ ಹೋನ್ನಿಹಳ್ಳಿ,
ಚಾಲಕ ಮಲ್ಲೇಶರವರು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.