ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ತಾಲೂಕಿನ ಅವರಾದ ಬಿ ಗ್ರಾಮದ ಬಳಿ ಸರಣಿ ಅಪಘಾತವಾಗಿದ್ದು, ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಬೈಕ್ ಹಾಗೂ ಮೂರು ಕಾರುಗಳ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಬೈಕ್,ಗೆ ಡಿಕ್ಕಿ ಹೊಡೆದ ಕಾರು,ಬಳಿಕ ಕಾರಿಗೆ ಹಿಂಬದಿಯಿಂದ ಮತ್ತೆರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮತ್ತು ಕಾರಿನಲ್ಲಿದ್ದ ಮೂವರು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಂಬರೀಷ್,ರವಿ, ಮಲ್ಲಿಕಾರ್ಜುನ ಹಾಗೂ ನರೇಶ್ ಎಂಬುವವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು, ಕಲಬುರಗಿ ಸಂಚಾರಿ ಠಾಣೆ -೨ರಲ್ಲಿ ಪ್ರಕರಣ ದಾಖಲಾಗಿದೆ.