SERIAL | ಸಿಂಪಲ್​​ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ ‘ಪಾಪ ಪಾಂಡು’ ಧಾರಾವಾಹಿ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಮಹತಿ’ ಎಂದೇ ಖ್ಯಾತರಾಗಿರುವ ಕಿರುತೆರೆ ನಟಿ ನಯನಾ ನಾಗರಾಜ್ ಸರಳ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಈ ನಿಶ್ಚಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. “ಪಾಪಾ ಪಾಂಡು” ಮತ್ತು “ಗಿಣಿರಾಮ” ಧಾರಾವಾಹಿಗಳ ನಾಯಕಿಯಾಗಿ ನಯನಾ ನಾಗರಾಜ್ ಮಿಂಚಿದ್ದರು. ನಟನೆಯ ಜೊತೆಗೆ ತಮ್ಮ ಕೋಗಿಲೆ ಕಂಠದಿಂದ ಗಾಯಕಿಯಾಗಿಯೂ ಮೆಚ್ಚುಗೆ ಪಡೆದಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಸುಹಾಸ್ ನನ್ನು ಪ್ರೀತಿಸುತ್ತಿದ್ದ ನಯನಾ ನಾಗರಾಜ್, ಕುಟುಂಬ ಸದಸ್ಯರ ಸಮ್ಮುಖದಲ್ಲಿ ತಮ್ಮ ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಡಿಯೋವನ್ನು ನಯನಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!