ಬರ ಪರಿಹಾರಕ್ಕೆ ಸರಣಿ ಸಭೆ, 130 ತಾಲೂಕುಗಳು ‘ಬರಪೀಡಿತ?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮಳೆಯಿಲ್ಲದೆ ಬರಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಸರಣಿ ಸಭೆಗೆ ಮುಂದಾಗಿದೆ. ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಮಳೆ ಕೊರತೆಯಾಗಿದ್ದು, ಒಟ್ಟಾರೆ 130 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇದೆ.

ಇಂದು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆಯಾಗುವ ಸಾಧ್ಯತೆಯಿದೆ. ಮಳೆಯಿಲ್ಲದೆ ರೈತರು ಕಂಗಾಲಾಗಿದ್ದು, ರೈತರ ಆತ್ಮಹತ್ಯೆ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಮಳೆ ನಂಬಿಕೊಂಡು ಉಳುಮೆ ಮಾಡಿದ್ದವರಲ್ಲಿ ಹಲವರ ಬೆಳೆ ಒಣಗಿಹೋಗಿದ್ದರೆ, ಇನ್ನು ಹಲವರ ಬೆಳೆಗೆ ರೋಗ ಬಂದಿದೆ. ಇದ್ದ ದುಡ್ಡನ್ನೆಲ್ಲಾ ಬೀಜ, ಗೊಬ್ಬರಕ್ಕೆ ಖರ್ಚು ಮಾಡಿರುವ ಅನ್ನದಾತ ಇದೀಗ ಪರಿಹಾರಕ್ಕಾಗಿ ಸರ್ಕಾರದತ್ತ ಮುಖಮಾಡಿದ್ದಾನೆ.

ಮಳೆಬಾರದ ಪ್ರದೇಶಗಳಲ್ಲಿ ಸರ್ಕಾರ ಸರ್ವೇ ನಡೆಸಿದ್ದು, ಸಮೀಕ್ಷೆ ಆಧರಿಸಿ ಸಭೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!