ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಸರ್ಕಾರ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅನಾರೋಗ್ಯದಿಂದಾಗಿ ಥಾಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರವಿತ್ತು ಹಾಗಾಗಿ ಅವರು ತಮ್ಮ ಹಳ್ಳಿಗೆ ತೆರಳಿದ್ದರು. ಅದಾದ ಬಳಿಕ ಮುಂಬೈಗೆ ಆಗಮಿಸಿದಾಗಿನಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ಈ ಹಿನ್ನೆಲೆಯಲ್ಲಿ ಅವರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡೆಂಗ್ಯೂ, ಮಲೇರಿಯಾ ಪರೀಕ್ಷೆ ಮಾಡಲಾಗಿದೆ ಆದರೆ ವರದಿ ನೆಗೆಟಿವ್ ಬಂದಿದೆ. ಏಕನಾಥ್ ಶಿಂಧೆ ಜತೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಕೂಡ ಇದ್ದಾರೆ. ನಿರಂತರ ಜ್ವರ ಮತ್ತು ಗಂಟಲು ಸೋಂಕಿನಿಂದ ಸಿಎಂ ಕಂಗಾಲಾಗಿದ್ದಾರೆ. ಮೂಲಗಳ ಪ್ರಕಾರ ಏಕನಾಥ್ ಶಿಂಧೆ ಅವರ ರಕ್ತದಲ್ಲಿ ಪ್ಲೇಟ್ಲೆಟ್ಗಳು ಕಡಿಮೆಯಾಗಿವೆ. ಗಂಟಲಿನ ಸೋಂಕು ಹಾಗೂ ನಿರಂತರವಾಗಿ ಆ್ಯಂಟಿಬಯೋಟಿಕ್ ಸೇವನೆಯಿಂದಾಗಿ ದೇಹ ಮತ್ತಷ್ಟು ದುರ್ಬಲವಾಗಿದೆ ಎನ್ನಲಾಗಿದೆ.