ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ನ.29 ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಆಫ್ರಿಕಾಗೆ ತೆರಳಿದ್ದಾರೆ. ಇದೀಗ ಬುಡಕಟ್ಟು ಮಹಿಳೆಯರ ಜೊತೆ ನಟಿ ಸಖತ್ ಹೆಜ್ಜೆ ಹಾಕಿದ್ದಾರೆ. ಈ ಕುರಿತ ಪೋಸ್ಟ್ ಶೇರ್ ಮಾಡಿದ್ದಾರೆ.
ರಮ್ಯಾ ಆಫ್ರಿಕಾದಲ್ಲಿ ಜನ್ಮದಿನವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇಲ್ಲಿಯ ಹುಲಿ, ಆನೆ, ಸಿಂಹ, ಜಿರಾಫೆ ಹೀಗೆ ನಾನಾ ಪ್ರಾಣಿಗಳ ಫೋಟೋವನ್ನು ಸೆರೆಹಿಡಿದ್ದಾರೆ. ಬಳಿಕ ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ನೃತ್ಯ ಮಾಡಿರುವ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ಬುಡಕಟ್ಟು ಮಹಿಳೆಯರ ವಿಶೇಷ ನೃತ್ಯದಲ್ಲಿ ರಮ್ಯಾ ಕೂಡ ಭಾಗಿ ಆಗಿದ್ದಾರೆ. ಅಷ್ಟೇ ಖುಷಿಯಿಂದಲೇ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
View this post on Instagram