ಜಿ20 ಶೃಂಗಸಭೆ: ಒಂದು ಭೂಮಿ ವಿಷಯ ಕುರಿತ ಮೊದಲ ಸೆಷನ್ ಮುಕ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೆಹಲಿಯಲ್ಲಿ ಇಂದು ನಡೆಯುತ್ತಿರುವ ಜಿ20 ಶೃಂಗಸಭೆಯ ಮೊದಲ ಅವಧಿಯಲ್ಲಿ ನಡೆದ ಒಂದು ಭೂಮಿ ವಿಷಯ ಕುರಿತ ಚರ್ಚೆ ಮುಕ್ತಾಯಗೊಂಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಅವರು, ‘ಒಂದು ಭೂಮಿ’ ವಿಷಯ ಬಗ್ಗೆ ಮೊದಲ ಅವಧಿಯಲ್ಲಿ ಚರ್ಚಿಸಲಾಗಿದೆ. ಮಾನವ ಕೇಂದ್ರೀಕೃತ ಅಭಿವೃದ್ಧಿ ಹಾಗೂ ಲೈಫ್ ಮಿಷನ್, ಅಂತಾರಾಷ್ಟ್ರೀಯ ಕಿರುಧಾನ್ಯ ವರ್ಷ ಆಚರಣೆ ಬಗ್ಗೆ ಚರ್ಚೆ ನಡೆದಿದೆ. ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಹಾಗೂ ಸೌರ ಶಕ್ತಿಗೆ ಉತ್ತೇಜನ, ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗಿದೆ. ರಾಷ್ಟ್ರೀಯ ಹಸಿರು ಅನಿಲ ಮಿಷನ್, ಹಸಿರು ಗ್ರಿಡ್ಸ್ ಆರಂಭ ಬಗ್ಗೆ ಪ್ರಸ್ತಾಪ ಮಾಡಲಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಎರಡನೇ ಅಧಿವೇಶನ ನಡೆಯಲಿದ್ದು, ‘ಒಂದು ಕುಟುಂಬ’ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!