ಐಪಿಎಸ್ ಅಧಿಕಾರಿ ಡಿ.ರೂಪಾಗೆ ಹಿನ್ನಡೆ: ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಒಂದು ವರ್ಷ ಹಿಂದೆ ಐಎಎಸ್ ಆಫೀಸರ್​ ರೋಹಿಣಿ ಸಿಂಧೂರಿಯವರ ಆಕ್ಷೇಪಾರ್ಹ ಫೋಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಐಪಿಎಸ್ ಅಧಿಕಾರಿ ಡಿ.ರೂಪಾ ದೊಡ್ಡ ಕಿಚ್ಚನ್ನು ಹೊತ್ತಿಸಿದ್ದರು.

ಇಬ್ಬರ ಜಗಳ ವಿಧಾನಸೌಧದ ಮೆಟ್ಟಿಲ್ಲನ್ನೂ ಕೂಡ ಏರಿ. ಕೊನೆಗೆ ನ್ಯಾಯಾಲಯದಲ್ಲಿ ಡಿ ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವ ಮಟ್ಟಕ್ಕೂ ಹೋಯ್ತು.

ರೋಹಿಣಿ ತಮ್ಮ ವಿರುದ್ಧ ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದ ಡಿ ರೂಪಾ ಅವರಿಗೆ ನಿರಾಸೆ ಕಾದಿತ್ತು. ಕೇಸ್​ ರದ್ದಿಗೆ ಹೈಕೋರ್ಟ್​ ನಿರಾಕರಿಸಿತ್ತು. ಸದ್ಯ ಡಿ. ರೂಪಾ ಅವರಿಗೆ ಸುಪ್ರೀಂಕೋರ್ಟ್​​ನಲ್ಲೂ ಕೂಡ ಹಿನ್ನಡೆಯುಂಟಾಗಿದೆ. ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್,​ ಕೇಸ್ ರದ್ದು ಪಡಿಸಲು ನಿರಾಕರಿಸಿ, ಹೈಕೋರ್ಟ್ ಆದೇಶದಲ್ಲಿ ನಾವೇಕೆ ಮಧ್ಯಪ್ರವೇಶಿಸಬೇಕು? ನಾವು ಪ್ರಕರಣ ಸೆಟ್ಲ್​ಮೆಂಟ್ ಆಗಲಿ ಎಂದು ಬಯಸಿದ್ದೇವು. ಈಗ ಇಬ್ಬರೂ ಬಹಳ ಸಮಯ ತೆಗೆದುಕೊಂಡಿದ್ದಾರೆ ಎಂದಿರುವ ಸರ್ವೋಚ್ಛ ನ್ಯಾಯಾಲಯ. ರೂಪಾ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೂಕದ್ದಮೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮುಂದುವರಿಸಿದೆ.

ಸುಪ್ರೀಂಕೋರ್ಟ್​ನಲ್ಲಿ ನವೆಂಬರ್ 5ರಂದು ಅಂತಿಮ ಹಂತದ ವಿಚಾರಣೆ ನಡೆಯಲಿದ್ದು. ಮೊದಲ ಐದು ಕೇಸ್​ಗಳ ಪೈಕಿ ಒಂದು ಕೇಸ್ ಆಗಿ ವಿಚಾರಣೆಗೆ ಪಟ್ಟಿ ಮಾಡಲು ಸೂಚನೆ ನೀಡಲಾಗಿದೆ.

ನ್ಯಾಯಮೂರ್ತಿ ಅಭಯ ಓಕಾ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಈ ಸೂಚನೆ ನೀಡಲಾಗಿದೆ. ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್​ ಸೂಚಿಸಿತ್ತು. ಆದರೆ, ರಾಜಿ ಸಂಧಾನಕ್ಕೆ ಇಬ್ಬರು ಒಪ್ಪದ ಕಾರಣ ಸುಪ್ರೀಂಕೋರ್ಟ್ ವಿಚಾರಣೆ ಮುಂದುವರಿಸಲು ಸಜ್ಜಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!