Monday, October 2, 2023

Latest Posts

ವರ್ಜೀನಿಯಾ ಪ್ರೌಢಶಾಲೆಯಲ್ಲಿ ಗುಂಡಿನ ದಾಳಿ: ಏಳು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವರ್ಜೀನಿಯಾದಲ್ಲಿ ಹೈಸ್ಕೂಲ್ ಪದವಿ ಸಮಾರಂಭದಲ್ಲಿ ಗುಂಡಿನ ದಾಳಿ ನಡೆದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ವರ್ಜೀನಿಯಾದ ರಿಚ್ಮಂಡ್‌ನಲ್ಲಿರುವ ಆಲ್ಟ್ರಿಯಾ ಥಿಯೇಟರ್ ಹೊರಗೆ ಮಂಗಳವಾರ ರಾತ್ರಿ ಹೈಸ್ಕೂಲ್ ಪದವಿ ಸಮಾರಂಭದ ನಂತರ ಗುಂಡಿನ ದಾಳಿಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಶೂಟರ್‌ಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ರಿಚ್ಮಂಡ್ ಮಧ್ಯಂತರ ಪೊಲೀಸ್ ಮುಖ್ಯಸ್ಥ ರಿಕ್ ಎಡ್ವರ್ಡ್ಸ್ ತಿಳಿಸಿದ್ದಾರೆ.

ರಿಚ್ಮಂಡ್ ಪಬ್ಲಿಕ್ ಸ್ಕೂಲ್ಸ್ ಅಧಿಕಾರಿ ಮ್ಯಾಥ್ಯೂ ಸ್ಟಾನ್ಲಿ ಪ್ರಕಾರ, ಸ್ಕೂಲ್‌ ಬಳಿಕ ವರ್ಜೀನಿಯಾ ಕಾಮನ್‌ವೆಲ್ತ್ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಥಿಯೇಟರ್‌ಗೆ ಅಡ್ಡಲಾಗಿ ಪಾರ್ಕ್ ಇದ್ದು, ಅಲ್ಲಿಯೂ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶೂಟಿಂಗ್‌ನಿಂದಾಗಿ ಮತ್ತೊಂದು ಶಾಲೆಯ ಪದವಿ ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ಸ್ಟಾನ್ಲಿ ಹೇಳಿದ್ದಾರೆ. ರಿಚ್ಮಂಡ್ ಮೇಯರ್ ಲೆವರ್ ಎಂ.ಸ್ಟೋನಿ ಟ್ವಿಟರ್ ನಲ್ಲಿ ಗುಂಡಿನ ದಾಳಿ ಘಟನೆ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಶೂಟಿಂಗ್ ನಡೆದಿರುವ ಮನ್ನೋ ಪಾರ್ಕ್ ನಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದ್ದು, ಆ ಪ್ರದೇಶಕ್ಕೆ ಯಾರೂ ಬರಬೇಡಿ ಎಂದು ಮೇಯರ್ ಸ್ಟೋನಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!