October 8, 2026
Thursday, October 8, 2026
spot_img

ನೇಪಾಳದಲ್ಲಿ ಭೀಕರ ಪ್ರವಾಹ: ಪ್ರಧಾನಿ ಬಲೇಂದ್ರ ಶಾಗೆ ಕರೆ ಮಾಡಿ ಸಹಾಯ ಹಸ್ತ ಚಾಚಿದ ಪಿಎಂ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೇಪಾಳದಲ್ಲಿ ಸಂಭವಿಸಿರಿವ ಭೀಕರ ಪ್ರವಾಹದಿಂದ ಅಪಾರ ಸಾವು-ನೋವು ಉಂಟಾಗಿದೆ. ಈ ಸಂಧರ್ಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತೀತ್ರ ಸಂತಾಪ ಸೂಚಿದ್ದಾರೆ. ಅಲ್ಲದೆ, ಸಂಕಷ್ಟದ ಸಮಯದಲ್ಲಿ ಭಾರತವು ನೇಪಾಳದ ಬೆನ್ನಿಗೆ ನಿಲ್ಲಲಿದ್ದು, ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ಭಾರತವು ನೇಪಾಳದ ಜನತೆಯ ಪರ ನಿಲ್ಲಲಿದೆ

ಈ ಕುರಿತು ನೇಪಾಳದ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ನೇಪಾಳದ ಪ್ರವಾಹದಿಂದ ಉಂಟಾದ ಜೀವಹಾನಿಗೆ ಸಂತಾಪ ಸೂಚಿಸಿದ್ದೇನೆ. ಈ ಕಷ್ಟದ ಸಮಯದಲ್ಲಿ ಭಾರತವು ನೇಪಾಳದ ಜನತೆಯೊಂದಿಗೆ ನಿಲ್ಲಲಿದೆ. ನೇಪಾಳಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ಧವಾಗಿದೆ. ಎಂದು ಮೋದಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಉತ್ತರ ನೇಪಾಳದಲ್ಲಿ ಭೀಕರ ಪ್ರವಾಹ

ಇಂದು ಬುಧವಾರ ಮುಂಜಾನೆ ಟಿಬೆಟ್ ಕಡೆಯಿಂದ ಹರಿದುಬಂದ ಭೋಟೆ ಕೋಶಿ ನದಿಯ ನೀರಿನ ಮಟ್ಟ ದಿಢೀರನೆ ಹೆಚ್ಚಾದ ಕಾರಣ ಉತ್ತರ ನೇಪಾಳದಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಇದರಿಂದಾಗಿ ರಸುವಾ ಜಿಲ್ಲೆಯ ತಿಮುರೆ ಮತ್ತು ಸ್ಯಾಫ್ರುಬೆಸಿ ಸೇರಿದಂತೆ ಹತ್ತಿರದ ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಹಲವಾರು ವಾಹನಗಳು ಮತ್ತು ಆಸ್ತಿಪಾಸ್ತಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೇಪಾಳ ಸರ್ಕಾರ ಸೂಚನೆ ನೀಡಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಸೇನಾ ಹೆಲಿಕಾಪ್ಟರ್‌ಗಳು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಿದೆ.

Must Read