ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಜೈಲಿನಿಂದ ಪರಾರಿಯಾದ ಆರೋಪಿಯನ್ನು 23 ವರ್ಷದ ವಸಂತ್ ಎಂದು ಗುರುತಿಸಲಾಗಿದೆ.
ಈತ ದಾವಣಗೆರೆ ಉಪಕಾರಾಗೃಹದ ಗೋಡೆ ಮೇಲಿಂದ ಹಾರಿ ಬಳಿಕ ಸುತ್ತಮುತ್ತ ನೋಡಿಕೊಂಡು ಯಾರೂ ಇಲ್ಲದಿರುವುದನ್ನು ಕಂಡು ತನ್ನ ಕಾಲಿಗೆ ಪೆಟ್ಟಾಗಿದರೂ ಕುಂಟುತ್ತಲೇ ರಸ್ತೆದಾಟಿ ಪರಾರಿಯಾಗಿದ್ದಾನೆ.
ಆರೋಪಿ ಜೈಲಿನಿಂದ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಪರಾರಿಯಾದ ಕೆಲವು ಗಂಟೆಗಳ ಬಳಿಕ ಪೊಲೀಸರಿಗೆ ಗೊತ್ತಾಗಿದ್ದು, ಕೂಡಲೇ ಜೈಲು ಸಿಬ್ಬಂದಿ ಬಸವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಸ್ಕೇಪ್ ಆಗಿರುವ ಅತ್ಯಾಚಾರ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.