ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಬಹು ಬೇಡಿಕೆ ನಟಿಯಾಗಿದ್ದಾರೆ. ತನ್ನ ನೃತ್ಯ, ನಟನೆ ಶೈಲಯಿಂದ ಎಲ್ಲರ ಮನ ಗೆದ್ದರುವ ಶ್ರೀಲೀಲಾ ಸ್ಕಂದ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ರಾಮ್ ಪೋತಿನೇನಿ ಮತ್ತು ಬೋಯಪಾಟಿ ಶ್ರೀನು ಕಾಂಬಿನೇಷನ್ ಸಿನಿಮಾ ಸ್ಕಂದ ಚಿತ್ರ ಸೆಪ್ಟೆಂಬರ್ 15 ರಂದು ಬಿಡುಗಡೆಯಾಗುತ್ತಿದ್ದು, ಇದರೊಂದಿಗೆ ಚಿತ್ರತಂಡದ ಪ್ರಚಾರ ಶುರುವಾಗಿದೆ. ಶನಿವಾರ ಸಂಜೆ ಸ್ಕಂದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ವಿಶೇಷ ಆಕರ್ಷಣೆಯಾಗಿದ್ದರು. ಶ್ರೀಲೀಲಾ ಅವರ ಅಭಿನಯದ ಜೊತೆಗೆ ಅವರು ಸೂಪರ್ ಡ್ಯಾನ್ಸರ್ ಎಂದೂ ಕರೆಯುತ್ತಾರೆ. ಅವರು ಈಗಾಗಲೇ ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಮಾಸ್ ಡ್ಯಾನ್ಸ್ ಹೀರೋಗಳಿಗೆ ಪೈಪೋಟಿ ನೀಡಿ ಅವರ ಜೊತೆ ಹೆಜ್ಜೆ ಹಾಕುತ್ತಿರುವ ಶ್ರೀಲೀಲಾ ಅವರ ನೃತ್ಯ ಕೌಶಲ್ಯಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಇದೀಗ ಶ್ರೀಲೀಲಾ ತಮ್ಮಲ್ಲಿರುವ ಮತ್ತೊಂದು ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ಮತ್ತೊಮ್ಮೆ ಅಚ್ಚರಿಗೊಳಿಸಿದ್ದಾರೆ.
ಸ್ಕಂದ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಶ್ರೀಲೀಲಾ ಅವರು ಥಮನ್ ಅವರೊಂದಿಗೆ ವೇದಿಕೆಯಲ್ಲಿ ಹಾಡನ್ನು ಹಾಡಿದ್ದಾರೆ. ಶ್ರೀಲೀಲಾ ಹಾಡನ್ನು ಹಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೃತ್ಯ, ನಟನೆ, ತನ್ನ ಸೌಂದರ್ಯದಿಂದ ಮಂತ್ರಮುಗ್ಧರಾಗಿರುವ ಶ್ರೀಲೀಲಾ ಈಗ ತಮ್ಮ ಗಾಯನದಿಂದ ಅಭಿಮಾನಿಗಳು ಮತ್ತು ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಶ್ರೀಲೀಲಾ ಅವರ ಪ್ರತಿಭೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
Dance 10/10,Looks 10/10
Ease 10/10,Now singing 10/10#SreeLeela 💥💥💥
pic.twitter.com/57gRo2LBIw— BlueGrass (@Vtweetsss) August 27, 2023