ರಾಜ್ಯಾದ್ಯಂತ ಬರದ ಛಾಯೆ: ಈ ಬಾರಿ ಸರಳ ಸಾಂಪ್ರದಾಯಿಕ ದಸರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಾದ್ಯಂತ ಭೀಕರ ಬರಗಾಲ ಎದುರಾಗಿದ್ದು, ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಬ್ರೇಕ್ ಬಿದ್ದಿದೆ. ಕಳೆದ ವರ್ಷ ವೈಭವದ ಮೈಸೂರು ದಸರಾ ಆಚರಣೆ ಮಾಡಿದ್ದು, ಈ ವರ್ಷ ಬರದ ಕಾರಣದಿಂದ ಅನಗತ್ಯ ಖರ್ಚುಗಳಿಗೆ ಸರ್ಕಾರ ಕಡಿವಾಣ ಹಾಕಿದೆ.

ಕೊರೋನಾ ಕಾರಣದಿಂದಾಗಿ ಮೈಸೂರು ದಸರಾ ಸರಳವಾಗಿಯೇ ಆಚರಿಸಲಾಗಿತ್ತು. ಕಳೆದ ವರ್ಷ ಅದ್ಧೂರಿಯಾಗಿ ದಸರಾ ಆಚರಣೆ ಮಾಡಿದ್ದು, ದೀಪಗಳು, ಕಾರ್ಯಜ್ರಮಗಳು ಹಾಗೂ ಇತರ ಖರ್ಚುಗಳು ಸೇರಿ ಒಟ್ಟಾರೆ 26 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು.

ರಾಜ್ಯದ 237 ತಾಲೂಕುಗಳಲ್ಲಿ 195 ತಾಲೂಕುಗಳು ಬರಪೀಡಿತವಾಗಿದೆ. ಇದರಲ್ಲಿ 161 ತೀವ್ರ ಬರಪೀಡಿತ ತಾಲೂಕುಗಳಾಗಿವೆ. ಈ ವರ್ಷವೂ ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ಮುಂದಾಗಿತ್ತು. ಆದರೆ ಬರಗಾಲದಿಂದಾಗಿ ಈ ವರ್ಷ ಆಚರಣೆ ಸರಳ ಹಾಗೂ ಸಾಂಪ್ರದಾಯಿಕವಾಗಿರಲಿದೆ.

ಸಚಿವ ಎಚ್.ಸಿ. ಮಹದೇವಪ್ಪ ಈ ಬಗ್ಗೆ ಮಾತನಾಡಿದ್ದು, ಈ ವರ್ಷದ ಮೈಸೂರು ದಸರಾ ಆಚರಣೆ ಬಗ್ಗೆ ಸಭೆ ನಡೆಸಿದಾಗ ರಾಜ್ಯ ಬರಗಾಲ ಎದುರಿಸಿರಲಿಲ್ಲ. ಹಾಗಾಗಿ ಅದ್ಧೂರಿಯಾಗಿ ಆಚರಣೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಆದರೆ ಈಗ ಬರಗಾಲ ಎದುರಾಗಿದ್ದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಿದೆ. ಸಂಪೂರ್ಣ ಸರಳವಾದ ಆಚರಣೆ ಎಂದು ಹೇಳಲಾಗುವುದಿಲ್ಲ ಎಲ್ಲಿ ಬೇಕೋ ಅಲ್ಲಿ ಖರ್ಚು ಕಡಿಮೆ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!