ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಮಹಾರಾಜರ ಕುಟುಂಬ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇರಿಸಿದ್ದ ಚಿರತೆ ದಿಢೀರ್ ಸಾವನ್ನಪ್ಪಿದೆ .
ಬಂಡಿಪುರ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿಯನ್ನು ಮೈಸೂರು ಮಹಾರಾಜರ ಕುಟುಂಬ ರಕ್ಷಣೆ ಮಾಡಿತ್ತು. ಅದಕ್ಕೆ ಶ್ಯಾಡೋ ಎಂದು ಹೆಸರಿಟ್ಟು, ಬಳಿಕ ಅದನ್ನು ಮೈಸೂರು ಮೃಗಾಲಯಕ್ಕೆ ಹಸ್ತಾಂತರಿಸಿ ಅಲ್ಲಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಚಿರತೆ ದಿಢೀರ್ ಸಾವನ್ನಪ್ಪಿದೆ.
ಆರೋಗ್ಯವಾಗಿದ್ದ ಚಿರತೆ ಸಾವಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅನುಭವಿ ವೈದ್ಯರು ಮತ್ತು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯಗಳು ಕಾರಣ ಎಂದು ಪ್ರಾಣಿ ಪ್ರಿಯರ ಆರೋಪವಾಗಿದೆ. ಇನ್ನೂ ಕಳೆದ ಮೂರು ತಿಂಗಳಲ್ಲಿ ಚಿರತೆ, ಹುಲಿ ಸೇರಿ 20 ಅಪರೂಪದ ಪ್ರಾಣಿಗಳ ಸರಣಿ ಸಾವನ್ನಪ್ಪಿದೆ.