ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟ್ಯಾಂಡ್ ಅಪ್ ಕಮೀಡಿಯನ್ ಕಾರ್ತಿಕ್ ಕುಮಾರ್ ಪತ್ನಿ ಗಾಯಕಿ ಸುಚಿತ್ರಾ ಅವರ ಹೆಸರು ಮತ್ತೆ ಸುದ್ದಿಯಲ್ಲಿದೆ.
ಕೆಲ ವರ್ಷಗಳ ಹಿಂದೆ ಸುಚೀ ಲೀಕ್ಸ್ (suchi leaks) ಹೆಸರಿನಲ್ಲಿ,ನಟ ಧನುಷ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ಆಂಡ್ರಿಯಾ, ಸಂಚಿತಾ ಶೆಟ್ಟಿ ಸೇರಿದಂತೆ ಹಲವು ತಾರೆಗಳ ಖಾಸಗಿ ವಿಡಿಯೋ, ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೇ ಸಂದರ್ಭದಲ್ಲಿ ಕಾರ್ತಿಕ್ ಕುಮಾರ್ ಮತ್ತು ಧನುಷ್ ಅವರ ವೈಯಕ್ತಿಕ ಫೋಟೋಗಳನ್ನು ಸುಚಿಲೀಕ್ಸ್ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಇದೀಗ ಮತ್ತೆ ಅದೇ ವಿಷಯವಾಗಿ ಸುಚಿತ್ರಾ ಮಾತನಾಡಿದ್ದಾರೆ.
ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಸಲಿಂಗಕಾಮಿ ಎಂದು ಹೇಳಿರುವ ಗಾಯಕಿ ಸುಚಿತ್ರಾ ಇದೀಗ ಕಾರ್ತಿಕ್, ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಜೊತೆ ಸಲಿಂಗಕಾಮಿ ಸಭೆ ನಡೆಸಿದ್ದ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ನನ್ನ ಮಾಜಿ ಪತಿ ಕಿಂಗ್ ಖಾನ್ ಶಾರುಖ್ ಮತ್ತು ನಿರ್ದೇಶಕ ಕರಣ್ ಜೊತೆ ಲಂಡನ್‌ನಲ್ಲಿ “ಸಲಿಂಗಕಾಮಿ ಸಭೆ” ನಡೆಸಿದ್ದಾರೆ ಎಂದು ಸುಚಿತ್ರಾ ಹೇಳಿದ್ದಾರೆ.
ಸಾಮಾನ್ಯವಾಗಿ ಸಲಿಂಗಕಾಮವು ಕಾನೂನುಬಾಹಿರವಲ್ಲದ ದೇಶಗಳಿಗೆ ಇವರು ವಿಹಾರಕ್ಕೆ ಹೋಗುತ್ತಾರೆ ಎಂದು ಸುಚಿತ್ರಾ ಹೇಳಿದ್ದಾರೆ. ಇದೀಗ ಈ ಆರೋಪ ಬಾಲಿವುಡ್ನಲ್ಲಿ ಹಲ್ಚಲ್ ಸೃಷ್ಟಿಸಿದೆ.
ಮೊನ್ನೆ ತಾನೇ ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಸುಚಿತ್ರಾ ಈ ವಿಷಯದ ಮಧ್ಯೆ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಸಲಿಂಗಿ ಎಂದು ಹೇಳಿಕೊಂಡಿದ್ದರು.
ಕಾರ್ತಿಕ್ 100% ಸಲಿಂಗಕಾಮಿ. ಯಾರಿಗೂ ತಿಳಿಯದಂತೆ ಸಲಿಂಗಕಾಮಿಯಾಗಿ ವಿಭಿನ್ನ ಜೀವನ ನಡೆಸುತ್ತಿದ್ದರು. ಮದುವೆಯಾದ 10 ವರ್ಷಗಳ ನಂತರ ನಾನು ಅದನ್ನು ಅರಿತುಕೊಂಡೆ. ಮಕ್ಕಳಾಗಿಲ್ಲ ಎಂದು ವೈದ್ಯರ ಬಳಿ ಹೋದಾಗ ನನಗೆ ಅರಿವಾಯಿತು. ಅವರು ಪುರುಷರೊಂದಿಗೆ ಸುತ್ತಾಡುತ್ತಿದ್ದರು, ಧನುಷ್ ಜೊತೆ ಇರುತ್ತಿದ್ದರು ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾರ್ತಿಕ್ ಅವರು ನಾನು ಸಲಿಂಗಿ ಎಂದು ಅವಳು ಹೇಳಿದ್ದರೆ ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದಿದ್ದರು. ಆದರೆ ಇದೀಗ ಶಾರುಖ್ ಖಾನ್ ಹೆಸರು ಎಳೆದು ತಂದಿರುವುದಕ್ಕೆ ಶಾರುಖ್ ಫ್ಯಾನ್ಸ್ ಗರಂ ಆಗಿದ್ದಾರೆ.