BOLLYWOOD| ಅಭಿಮಾನಿಗಳಿಗೆ ಶಾರುಖ್ ಕಡೆಯಿಂದ ಹುಟ್ಟುಹಬ್ಬದ ಗಿಫ್ಟ್: ‘ಡಂಕಿ’ ಟೀಸರ್ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಜೊತೆಗೂಡಿ ‘ಡಂಕಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ಈ ಸಿನಿಮಾ ಕ್ರಿಸ್ ಮಸ್ ಗೆ ಡೇಟ್ ಕೂಡ ಫಿಕ್ಸ್ ಮಾಡಿದೆ. ಒಂದು ಪೋಸ್ಟರ್ ಬಿಟ್ಟರೆ ಈ ಸಿನಿಮಾದಿಂದ ಇದುವರೆಗೂ ಯಾವುದೇ ಅಪ್ ಡೇಟ್ ನೀಡಿಲ್ಲ. ಇಂದು ನವೆಂಬರ್ 2 ಶಾರುಖ್ ಹುಟ್ಟುಹಬ್ಬದ ದಿನವಾದ ಕಾರಣ ಡಂಕಿ ತಂಡ ಅಭಿಮಾನಿಗಳಿಗೆ ಒಳ್ಳೆಯ ಉಡುಗೊರೆಯನ್ನು ನೀಡಿದೆ. ಚಿತ್ರದ ಪುಟ್ಟ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಐವರು ಯುವ ತಾರೆಯರು ಇಂಗ್ಲೆಂಡ್‌ಗೆ ಹೋಗಲು ನಿರ್ಧರಿಸಿರುವುದು ಟೀಸರ್‌ನಿಂದ ಸ್ಪಷ್ಟವಾಗಿದೆ. ಆ ಪ್ರಯತ್ನದಲ್ಲಿ ಅವರು ಎದುರಿಸಿದ ಸಮಸ್ಯೆಗಳೇನು ಎಂಬುದು ಉಳಿದ ಕಥೆ. 3 ಈಡಿಯಟ್ಸ್, ಪಿಕೆ, ಸಂಜು ಚಿತ್ರಗಳನ್ನು ನಿರ್ದೇಶಿಸಿರುವ ಹಿರಾನಿ ಅವರಿಂದ ಈ ಚಿತ್ರ ಬರುತ್ತಿರುವುದರಿಂದ ಸಿನಿಮಾದ ಕಥೆ ಮತ್ತು ಭಾವನೆಗಳ ಮೇಲೆ ಉತ್ತಮ ನಿರೀಕ್ಷೆಗಳಿವೆ. ಸದ್ಯದಲ್ಲೇ ಎರಡನೇ ಟೀಸರ್ ಕೂಡ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!