Sunday, December 3, 2023

Latest Posts

ಶಾರುಖ್ ಮನೆ ಮುಂದೆ ವಜ್ರಗಳ ನಾಮಫಲಕ! ಬೆಲೆಯೆಷ್ಟು ಗೊತ್ತಾ?

ಹೊಸದಿಗಂತ ಡಿಜಿಡಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಮುಂಬೈಗೆ ಭೇಟಿ ನೀಡಿದವರು ಸಿನಿಮಾ ಸ್ಟಾರ್‌ ಮನೆ ವೀಕ್ಷಣೆಗೆ ತೆರಳುವುದೂ ಕಾಮನೆ ಅದರಲ್ಲಿ ಶಾರುಖ್ ಖಾನ್ ಮನೆ ಕೂಡ ಒಂದು. ಶಾರುಖ್ ತನಗೆ ಇಷ್ಟ ಬಂದ ರೀತಿ ಗ್ರ್ಯಾಂಡ್ ಆಗಿ ಮನೆ ಕಟ್ಟಿಕೊಂಡಿದ್ದಾರೆ. ಶಾರುಖ್ ಮನೆಗೆ ಮನ್ನತ್ ಎಂದು ಹೆಸರಿಟ್ಟಿದ್ದಾರೆ.

ಆದರೆ ಈ ಮನ್ನತ್ ಗೆ ಇನ್ನಷ್ಟು ಹಿರಿಮೆ ತರಲು ಶಾರುಖ್ ವಜ್ರಗಳಿದ್ದ ನಾಮಫಲಕವನ್ನ ಹಾಕಿಸಿದ್ದಾರೆ. ವಜ್ರಖಚಿತ ನಾಮಫಲಕದಲ್ಲಿ ಮನ್ನತ್ ಎಂದು ಬರೆಯಲಾಗಿದೆ. ಇದನ್ನು ಮನೆಯ ಮುಂದೆ ಸ್ಥಾಪಿಸಲಾಗಿತ್ತು. ಭದ್ರತಾ ಕಾರಣಗಳಿಂದ ವಜ್ರದ ನಾಮಫಲಕವನ್ನು ಈ ಮೊದಲೇ ತೆಗೆಯಲಾಗಿತ್ತು.

ಶಾರುಖ್ ಮತ್ತೊಮ್ಮೆ ತಮ್ಮ ಮನೆಗೆ ವಜ್ರದ ನಾಮಫಲಕ ಹಾಕಿಸಿದರು. ಶಾರುಖ್ ಬಳಿ ಸುಮಾರು 35 ಲಕ್ಷ ಮೌಲ್ಯದ ವಜ್ರದ ತುಂಡುಗಳಿಂದ ತಯಾರಿಸಿದ ನಾಮಫಲಕವಿದ್ದು, ಮನ್ನತ್ ಎಂದು ಬರೆದು ಮನೆಯ ಮುಂದೆ ಇಟ್ಟಿದ್ದಾರೆ. ರಾತ್ರಿ ವೇಳೆ ಆ ವಜ್ರಗಳು ಮಿಂಚುತ್ತಾ ಮನೆಗೆ ಇನ್ನಷ್ಟು ಸೌಂದರ್ಯವನ್ನು ತಂದುಕೊಟ್ಟಿವೆ. ವಜ್ರದ ನಾಮಫಲಕವನ್ನು ನೋಡಲು ಮತ್ತೊಮ್ಮೆ ಶಾರುಖ್ ಮನೆಗೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಎಷ್ಟೇ ಹಣವಿದ್ದರೂ ವಜ್ರದಿಂದ ನಾಮಫಲಕ ತಯಾರಿಸಿ ಮನೆಯ ಹೊರಗೆ ಹಾಕಬೇಕೇ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಶಾರುಖ್ ಅವರ ಮನೆಯ ವಜ್ರದ ನಾಮಫಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!