ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಮತ್ತೊಮ್ಮೆ ತಮ್ಮ ಕರಿಯರ್‌ನ ಉತ್ತುಂಗದಲ್ಲಿ ಇದ್ದಾರೆ. ಪಠಾಣ್ ನಂತರ ಶಾರುಖ್ ನಸೀಬು ಬದಲಾಗಿದ್ದು, ಪಠಾಣ್ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಜವಾನ್ ರಿಲೀಸ್ ಆಗಿದ್ದು, ಜವಾನ್ ಕೂಡ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟಿಗಿನ ಯಶಸ್ಸು ಕಂಡಿದೆ.
ಶಾರುಖ್ ನೆಕ್ಸ್ಟ್ ಸಿನಿಮಾ ಡಂಕಿ, ಇದನ್ನು ರಾಜ್‌ಕುಮಾರ್ ಹಿರಾನಿ ಡೈರೆಕ್ಟ್ ಮಾಡ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ಈ ಹಿಂದೆಯೂ ಯಾವುದೇ ಆಕ್ಷನ್ ಸಿನಿಮಾ ಡೈರೆಕ್ಟ್ ಮಾಡಿಲ್ಲ. ಅವರದ್ದ ಸಾಫ್ಟ್ ಹ್ಯೂಮರ್ ವಿತ್ ಲೆಸನ್ ರೀತಿಯ ಸಿನಿಮಾವಾಗಿದೆ.
ಮುನ್ನಾಭಾಯಿ, ಪಿಕೆ, 3 ಇಡಿಯಟ್ಸ್, ಸಂಜು ಸಿನಿಮಾಗಳನ್ನು ಹಿರಾನಿ ಡೈರೆಕ್ಟ್ ಮಾಡಿದ್ದಾರೆ. ಒಂದೇ ಕ್ಲಾಸಿ ಸ್ಟೈಲ್‌ನ್ನು ಹಿರಾನಿ ಮೇಂಟೇನ್ ಮಾಡಿದ್ದಾರೆ. ಈ ಬಾರಿ ಕೂಡ ಇದೇ ಕಂಟಿನ್ಯೂ ಆಗುವ ನಿರೀಕ್ಷೆ ಇದೆ.
ಒಟ್ಟಾರೆ ಶಾರುಖ್ ಹಾಗೂ ರಾಜ್‌ಕುಮಾರ್ ಜೋಡಿಯಲ್ಲಿ ಸಿನಿಮಾ ಹೇಗಿರಲಿದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸಿನಿಮಾ ಡಿ.22ರಂದು ರಿಲೀಸ್ ಆಗಲಿದೆ.