ಏಷ್ಯಾಕಪ್‌ ಆರಂಭಕ್ಕೂ ಮುನ್ನ ಪಾಕ್‌ಗೆ ಆಘಾತ: ಟೀಂ ಇಂಡಿಯಾ ವಿರುದ್ಧದ ಪಂದ್ಯದಿಂದ ಸ್ಟಾರ್‌ ಬೌಲರ್‌ ಔಟ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಈ ಬಾರಿಯ ಏಷ್ಯಾ ಕಪ್‌ ಪಂದ್ಯಾವಳಿಯು ಆಗಸ್ಟ್ 27ರಿಂದ ಪ್ರಾರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕ್‌ ಮುಖಾಮುಖಿಯಾಗಲಿವೆ. ಈ ಕದನಕ್ಕೆ ಕೆಲವೇ ದಿನಗಳಿರುವಂತೆ ಪಾಕಿಸ್ತಾನಕ್ಕೆ ದೊಡ್ಡ ಅಘಾತವೊಂದು ಎದುರಾಗಿದೆ. ಪಾಕ್‌ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರ ಶಹೀನ್ ಶಾ ಆಫ್ರಿದಿ ಭಾರತ ವಿರುದ್ಧದ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ ಎಂಬ ಸುದ್ದಿ ಕೇಳಿಬಂದಿದೆ.
ಪ್ರಸ್ತುತ ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿರುವ ಪಾಕ್‌ ತಂಡದ ಭಾಗವಾಗಿರುವ ಅಫ್ರೀದಿ ಗಾಯದ ಕಾರಣದಿಂದ ಪಂದ್ಯವನ್ನು ಆಡುತ್ತಿಲ್ಲ. ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಯುವ ವೇಗಿ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಆದ್ದರಿಂದ 2ನೇ ಟೆಸ್ಟ್‌ನಿಂದಲೂ ಹೊರಗುಳಿದಿದ್ದರು. 2021 ರ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿ ಫೈನಲ್‌ ತಲುಪುವಲ್ಲಿ ಶಾಹೀನ್ ದೊಡ್ಡ ಪಾತ್ರವನ್ನು ವಹಿಸಿದ್ದರು. ಭಾರತ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನು ತಮ್ಮ ಸ್ವಿಂಗ್‌ಬ್ಲಿಂಗ್‌ ನಿದ ಔಟ್ ಮಾಡಿ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್‌ ಮೊಟ್ಟ ಮೊದಲ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶಾಹೀನ್ ಅವರ ಗಾಯದ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್, ಶಾಹಿನ್ ಗಾಯದ ನಿರ್ವಹಣೆ ತಂಡಕ್ಕೆ ದೊಡ್ಡ ಕಳವಳವಾಗಿದೆ ಎಂದು ಹೇಳಿದ್ದಾರೆ. “ಶಾಹೀನ್ ಅವರ ಫಿಟ್‌ನೆಸ್ ಬಗ್ಗೆ ಕಳವಳಗಳಿವೆ. ವೈದ್ಯರು ಮತ್ತು ಫಿಸಿಯೋ ತಂಡದೊಂದಿಗೆ ಪ್ರಯಾಣಿಸುತ್ತಿರುವ ಕಾರಣ ನಾವು ಅವರನ್ನು ಏಷ್ಯಾಕಪ್‌ ತಂಡದಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ. ಅಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬಹುದು. ನಾವು ದೀರ್ಘಾವಧಿಯ ದೃಷ್ಟಿಕೋನದಿಂದ ಯೋಚಿಸುತ್ತಿದ್ದೇವೆ. ಏಷ್ಯಾ ಕಪ್ ಮತ್ತು ಟಿ.20 ವಿಶ್ವಕಪ್ ವೇಳೆಗೆ ಆತ ಸುಧಾರಿಸಿಕೊಂಡು ಸಿದ್ಧನಾಗಬಹುದೆಂದು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಆತ ಏಷ್ಯಾಕಪ್‌ನಲ್ಲಿ ಆಡಬಹುದು ಎಂದು ಆಶಿಸುತ್ತೇವೆʼ ಎಂದು ಅಜಮ್ ಹೇಳಿದ್ದಾರೆ.
ಏಷ್ಯಾಕಪ್​ ಪಾಕ್ ತಂಡ:
ಬಾಬರ್ ಆಜಂ (ನಾ), ಶಾದಾಬ್ ಖಾನ್ (ಉಪ.ನಾ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!