ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಜವಾನ್ʼ ಚಿತ್ರತಂಡ ಈಗಾಗಲೇ ಭಾರೀ ಪ್ರಚಾರದಲ್ಲಿ ತೊಡಗಿದೆ. ಪ್ರಚಾರದ ಭಾಗವಾಗಿ ಶಾರುಖ್ ಖಾನ್ ಮೊಟ್ಟ ಮೊದಲ ಬಾರಿಗೆ ತಿರುಮತಿ ತಿಮ್ಮಪ್ಪನ ದರುಶನ ಪಡೆದರು. ಇಂದು ಬೆಳಿಗ್ಗೆ ಚೆನ್ನೈಗೆ ಚಿತ್ರತಂಡ ತಿರುಮಲಕ್ಕೆ ಬಂದು ವೆಂಕಟೇಶ್ವರ ಸ್ವಾಮಿಯ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು ದರುಶನ ಪಡೆದರು.
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಜವಾನ್ ತಂಡದೊಂದಿಗೆ ನಯನತಾರಾ, ಆಕೆಯ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಕೂಡ ಸ್ವಾಮಿಯ ದರುಶನ ಪಡೆದರು. ಶಾರುಖ್ ಖಾನ್ ಮೊದಲ ಬಾರಿಗೆ ತಿರುಮಲಕ್ಕೆ ಬಂದ ಬಳಿಕ ಅವರು ದೇವಸ್ಥಾನಕ್ಕೆ ಕಾಲಿಡುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಶೀಘ್ರದಲ್ಲೇ ಜವಾನ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 7 ರಂದು ಭಾರತದಾದ್ಯಂತ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದ್ದು, ಇದರಲ್ಲಿ ನಯನತಾರಾ ನಾಯಕಿಯಾಗಿ, ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿದ್ದಾರೆ. ಪ್ರಿಯಾಮಣಿ, ದೀಪಿಕಾ ಪಡುಕೋಣೆ..ಇನ್ನು ಕೆಲವು ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜವಾನ್ ತಮಿಳಿನ ಸ್ಟಾರ್ ಡೈರೆಕ್ಟರ್ ಅಟ್ಲಿ ನಿರ್ದೇಶನದ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ.
#WATCH | Andhra Pradesh: Actor Shah Rukh Khan, his daughter Suhana Khan and actress Nayanthara offered prayers at Sri Venkateshwara Swamy in Tirupati pic.twitter.com/KuN34HPfiv
— ANI (@ANI) September 5, 2023