Wednesday, September 28, 2022

Latest Posts

ಕಾಫಿ ವಿತ್ ಕರಣ್ ಶೋ ಗೆ ಬಂದ ಶಾರುಖ್ ಪತ್ನಿ ಗೌರಿ ಖಾನ್: ಮಗಳ ಡೇಟಿಂಗ್ ಕುರಿತು ಏನು ಸಲಹೆ ಕೊಟ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋನ 7ನೇ ಸೀಸನ್ ನಲ್ಲಿ ಈ ವಾರ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಮಹೀಪ್ ಕಪೂರ್, ಭಾವನಾ ಪಾಂಡೆ ಮೂವರು ಭಾಗಿಯಾಗಿದ್ದರು.

ಈ ವೇಳೆ ಮೂವರು ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದು, ತಮ್ಮ ಕುಟುಂಬ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಈ ವೇಳೆ ಕರಣ್ ಜೋಹರ್, ಗೌರಿ ಖಾನ್‌ಗೆ ಪ್ರಶ್ನೆ ಮಾಡಿ ಮಗಳು ಸುಹಾನಾ ಖಾನ್‌ಗೆ ಡೇಟಿಂಗ್ ಸಲಹೆ ಏನು ಕೊಡುತ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಗೌರಿ ಖಾನ್, ‘ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟ್ ಮಾಡಬೇಡ’ ಎಂದು ಹೇಳಿದ್ದಾರೆ.

https://www.instagram.com/reel/CirTUNqoubq/?utm_source=ig_embed&ig_rid=28f4d7bd-7ee8-425b-bc9b-9090ad82879d

ಇದೇ ಸಮಯದಲ್ಲಿ ಗೌರಿ ಪತಿ ಶಾರುಖ್ ಅವರ ಬಗ್ಗೆಯೂ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರು ಯಾವ ವಿಚಾರಕ್ಕೆ ಹೆಚ್ಚು ಕಿರಿಕಿರಿ ಮಾಡುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸಿದರು. ಮನೆಯೊಳಗಿಂತ ಹೆಚ್ಚು ಸಮಯ ಹೊರಗೆ ಕಳೆಯುತ್ತಾರೆ ಅಂತ ಕೆಲವೊಮ್ಮೆ ಅನಿಸುತ್ತದೆ. ಅದರಲ್ಲೂ ಪಾರ್ಟಿ ಸಮಯದಲ್ಲಿ ಹೊರಗೆ ಇರುತ್ತಾರೆ. ಜನರು ಅವನನ್ನು ಹುಡುಕಲು ಪ್ರಾರಂಭಿಸುತ್ತಾರೆ. ನಾವು ಮನೆಯೊಳಗೆ ಪಾರ್ಟಿ ಮಾಡುವುದಕ್ಕಿಂತ ರಸ್ತೆಯಲ್ಲಿ ಹೊರಗೆ ಪಾರ್ಟಿ ಮಾಡುತ್ತಿದ್ದೇವೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!