ಶಕ್ತಿ ಯೋಜನೆಗೆ ಸಿಗುತ್ತಿದೆ ಉತ್ತಮ ಸ್ಪಂದನೆ: ಒಂದೇ ತಿಂಗಳಲ್ಲಿ 20 ಕೋಟಿ ಮಹಿಳೆಯರ ಪ್ರಯಾಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ (free bus service) ಎಲ್ಲೆಡೆ ಉತ್ತಮ ಸ್ಪಂದನೆ ದೊರಕಿದೆ.

ಜೂನ್‌ 11 ರಂದು ಆರಂಭಗೊಂಡ ಈ ಯೋಜನೆಗೆ (Shakti Scheme)ಈವರೆಗೆ ಬರೋಬ್ಬರಿ 20 ಕೋಟಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಟಿಕೆಟ್‌ ಮೌಲ್ಯ 476 ಕೋಟಿ ರೂ.ಗಳಾಗಿವೆ.

ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜೂನ್‌ 11ರಿಂದ ಜುಲೈ 15ರವರೆಗೆ 20,06,24,622 ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಟಿಕೆಟ್‌ ಮೌಲ್ಯ 476,23,38,985 ರೂ.ಗಳಾಗಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಈ 4 ಸಾರಿಗೆ ನಿಗಮಗಳ ಪೈಕಿ ಬಿಎಂಟಿಸಿಯಲ್ಲಿ ಅತಿ ಹೆಚ್ಚು ಅಂದರೆ 6.46 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ, ಎರಡನೇ ಸ್ಥಾನದಲ್ಲಿ ಕೆಎಸ್‌ಆರ್‌ಟಿಸಿ ಇದ್ದು, ಇದರಲ್ಲಿ 6.09 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ.

ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಕೆಎಸ್‌ಆರ್‌ಟಿಸಿ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ ಬಿಎಂಟಿಸಿಗಿಂತಲೂ ಹೆಚ್ಚಾಗಿದೆ. ಬಿಎಂಟಿಸಿ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 83,25,69,911 ರೂ.ಇದ್ದರೆ, ಕೆಎಸ್‌ಆರ್‌ಟಿಸಿ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 178,18,74,943 ಇದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಟಿಕೆಟ್‌ ಮೌಲ್ಯ ಕೂಡ ಹೆಚ್ಚಾಗಿದೆ.

ಅದೇ ರೀತಿ ಜುಲೈ 15ರಂದು ಸಾರಿಗೆ ಬಸ್‌ಗಳಲ್ಲಿ 66,85,356 ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ಟಿಕೆಟ್‌ ಮೌಲ್ಯ 15,11,94,406 ರೂ.ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!