Wednesday, September 27, 2023

Latest Posts

ವಿಶ್ವ ಕೇಂದ್ರೀಯ ಬ್ಯಾಂಕರ್ ಗಳ ಪಟ್ಟಿಯಲ್ಲಿ ಶಕ್ತಿಕಾಂತ ದಾಸ್ ಟಾಪ್: ಪ್ರಧಾನಿ ಅಭಿನಂದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಕೇಂದ್ರೀಯ ಬ್ಯಾಂಕರ್ ಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅಗ್ರಸ್ಥಾನ ಗಳಿಸಿದ್ದಾರೆ.

ಅಮೆರಿಕ ಮೂಲದ ನಿಯತಕಾಲಿಕ ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2023ರಲ್ಲಿ ಶಕ್ತಿಕಾಂತ ದಾಸ್ ಅವರಿಗೆ A+ ರೇಟಿಂಗ್ ನೀಡಲಾಗಿದೆ. ಈ ಮೂಲಕ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಜಾಗತಿಕ ಆರ್ಥಿಕ ಅನಿಶ್ಚಿತತೆ ಸಮಯದಲ್ಲಿ ಭಾರತೀಯ ಆರ್ಥಿಕತೆಯನ್ನು ಅವರು ನಿಭಾಯಿಸಿದ ರೀತಿಗೆ ಅಭಿನಂದನೆ ಸಲ್ಲಿಸಲಾಗಿದೆ. ಆರ್ಥಿಕ ಪ್ರಗತಿಗೆ ಬೆಂಬಲ ನೀಡುವ ಮೂಲಕ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ನೆರವು ನೀಡಿರೋದಕ್ಕೆ ಶಕ್ತಿಕಾಂತ ದಾಸ್ ಅವರಿಗೆ A+ ರೇಟಿಂಗ್ ನೀಡಲಾಗಿದೆ. ಈ ಸಾಧನೆಗೆ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಶಕ್ತಿಕಾಂತ ದಾಸ್ ಅವರನ್ನು ಅಭಿನಂದಿಸಿ ಪ್ರಧಾನಿ ಪೋಸ್ಟ್ ಹಾಕಿದ್ದು, ಭಾರತದ ಪಾಲಿಗೆ ಇದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಶಕ್ತಿಕಾಂತ ದಾಸ್ ಆರ್ ಬಿಐ 25ನೇ ಗವರ್ನರ್ ಆಗಿ 2018ರ ಡಿಸೆಂಬರ್ 12ರಂದು ಅಧಿಕಾರ ಸ್ವೀಕರಿಸಿದ್ದರು.ಇದಕ್ಕೂ ಮುನ್ನ ದಾಸ್ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಇನ್ನು ಲಂಡನ್ ನಲ್ಲಿ ಜೂನ್ ನಲ್ಲಿ ನಡೆದ 2023ನೇ ಸಾಲಿನ ಸೆಂಟ್ರಲ್ ಬ್ಯಾಂಕಿಂಗ್ ಆವಾರ್ಡ್ಸ್ 2023ರಲ್ಲಿ ಶಕ್ತಿಕಾಂತ ದಾಸ್ ಅವರಿಗೆ ‘ಗವರ್ನರ್ ಆಫ್ ದಿ ಇಯರ್’ ಗೌರವ ನೀಡಲಾಗಿತ್ತು.

ಪ್ರಧಾನಿ ಅಭಿನಂದನೆ
ಶಕ್ತಿಕಾಂತ ದಾಸ್ ಅವರಿಗೆ ಸಿಕ್ಕಿರುವ ಈ ವಿಶೇಷ ಮನ್ನಣೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ‘ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಅಭಿನಂದನೆಗಳು. ಭಾರತದ ಪಾಲಿಗೆ ಇದು ಹೆಮ್ಮೆಯ ಕ್ಷಣ. ಜಾಗತಿಕ ವೇದಿಕೆಯಲ್ಲಿ ನಮ್ಮ ಹಣಕಾಸಿನ ನಾಯಕತ್ವವನ್ನು ಇದು ಪ್ರತಿಬಿಂಬಿಸಿದೆ. ಅವರ ಸಮರ್ಪಣೆ ಹಾಗೂ ದೂರದೃಷ್ಟಿ ನಮ್ಮ ರಾಷ್ಟ್ರದ ಬೆಳವಣಿಗೆ ಪಯಣವನ್ನು ಇನ್ನಷ್ಟು ಸದೃಢಗೊಳಿಸಲಿದೆ’ ಎಂದು ಎಕ್ಸ್ ನಲ್ಲಿ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!