ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಶಕ್ತಿಮಾನ್’ ಖ್ಯಾತಿಯ ಖ್ಯಾತ ಹಿರಿಯ ನಟ ಮುಖೇಶ್ ಖನ್ನಾ ಮತ್ತೆ ಕಪಿಲ್ ಶರ್ಮಾರನ್ನು ಟೀಕಿಸಿದ್ದಾರೆ.
‘ಅನ್‌ಸೆನ್ಸಾರ್ಡ್ ವಿತ್ ಶಾರ್ದೂಲ್’ ಪಾಡ್‌ಕ್ಯಾಸ್ಟ್‌ನ ಸಂಭಾಷಣೆಯ ಸಮಯದಲ್ಲಿ, ಮುಖೇಶ್ ಖನ್ನಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡು ಕಪಿಲ್ ಶರ್ಮಾರನ್ನು ಟೀಕಿಸಿದ್ದಾರೆ.
ಗೋಲ್ಡ್ ಅವಾರ್ಡ್ಸ್ ನಲ್ಲಿ ನನಗೆ ಪ್ರಶಸ್ತಿ ನೀಡಲಾಗಿತ್ತು, ಮತ್ತು ಉದ್ಯಮಕ್ಕೆ ಹೊಸಬರಾಗಿದ್ದ ಮತ್ತು ಕಾಮಿಡಿ ಸರ್ಕಸ್ ಮಾಡುತ್ತಿದ್ದ ಕಪಿಲ್ ಶರ್ಮಾರಿಗೂ ಪ್ರಶಸ್ತಿ ನೀಡಲಾಗಿತ್ತು. ಅವರು ಬಂದು ನನ್ನ ಪಕ್ಕದಲ್ಲಿ ಕುಳಿತರು ಮತ್ತು ನಮಸ್ಕಾರ ಕೂಡ ಹೇಳಲಿಲ್ಲ. ಅವರು ಸುಮಾರು 20 ನಿಮಿಷಗಳ ಕಾಲ ಅಲ್ಲಿಯೇ ಕುಳಿತಿದ್ದರು. ಅವರ ಹೆಸರು ಕರೆದಾಗ, ಪ್ರಶಸ್ತಿಯನ್ನು ತೆಗೆದುಕೊಂಡು ಮನೆಗೆ ಹೋದರು ಎಂದು ಹೇಳಿದ್ದಾರೆ.
ಮುಖೇಶ್ ಖನ್ನಾ ಕಪಿಲ್ ಶರ್ಮಾರನ್ನು ಟೀಕಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕಪಿಲ್ ಶರ್ಮಾ ಅವರ ಹಾಸ್ಯ ಮತ್ತು ಅವರ ಕಾರ್ಯಕ್ರಮವನ್ನು ಅಶ್ಲೀಲ ಎಂದು ಕರೆದಿದ್ದರು. ಈಗ ಮತ್ತೆ ಕಪಿಲ್ ಶರ್ಮಾರನ್ನು ಗುರಿಯಾಗಿಸಿಕೊಂಡು ನನಗೆ ನಮಸ್ಕಾರ ಮಾಡುವ ಸೌಜನ್ಯ ಕೂಡ ಇಲ್ಲ ಎಂದು ಹೇಳಿದ್ದಾರೆ.