ಫೀಫಾಗೆ ನಾಚಿಕೆಯಾಗ್ಬೇಕು.. ಹಿಜಾಬ್ ಅಭಿಮಾನಿ ವೀಡಿಯೊ ಹಂಚಿಕೊಂಡ ಫುಟ್ಬಾಲ್‌ ಸಂಸ್ಥೆ ವಿರುದ್ಧ ಸಿಡಿದೆದ್ದ ಇರಾನಿ ಮಹಿಳೆಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕತಾರ್‌ ನಲ್ಲಿ ಸಾಗುತ್ತಿರುವ ಫುಟ್ಬಾಲ್‌ ವಿಶ್ವಕಪ್ ಪಂದ್ಯವಾಳಿಯಲ್ಲಿ ಸೋಮವಾರ ಇಂಗ್ಲೆಂಡ್ ಮತ್ತು ಇರಾನ್ ನಡುವೆ ನಡೆದ ಪಂದ್ಯದಲ್ಲಿ ಹಿಜಾಬ್ ಧರಿಸಿರುವ ಇರಾನ್ ಮಹಿಳೆಯ ವೀಡಿಯೊವನ್ನು ಫೋಸ್ಟ್‌ ಮಾಡಿದ್ದ ಫಿಫಾ ತೀವ್ರ ಟೀಕೆಗೆ ಗುರಿಯಾಯಿಗಿದೆ.
ಫುಟ್‌ಬಾಲ್ ಆಡಳಿತ ಮಂಡಳಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಂಡ ವೀಡಿಯೊದಲ್ಲಿ, ಮುಖದ ಮೇಲೆ ಇರಾನಿನ ಧ್ವಜವನ್ನು ಚಿತ್ರಿಸಿದ ಮಹಿಳೆಯೊಬ್ಬರು ಹಿಜಾಬ್ ಧರಿಸಿ ಇರಾನ್‌ ಬೆಂಬಲಿಸುತ್ತಿರುದನ್ನು ಕಾಣಬಹುದು.
ಕುರ್ದಿಶ್-ಇರಾನಿಯನ್ ಯುವತಿ ಮಹ್ಸಾ ಝಿನಾ ಅಮಿನಿಯನ್ನು ಹಿಜಾಬ್ ಧರಿಸದಿದ್ದಕ್ಕಾಗಿ ಇರಾನ್ ಪೊಲೀಸರು ಬಂಧಿಸಿ ಹತ್ಯೆಗೈದ ಬಳಿಕ ಇರಾನ್‌ ನಲ್ಲಿ ಹಿಜಾಬ್‌ ಸಂಘರ್ಷ ಭುಗಿಲೆದ್ದಿದೆ. ಇರಾನ್‌ನ ಕುಖ್ಯಾತ ನೈತಿಕ ಪೊಲೀಸ್ ಗಿರಿ ವಿರುದ್ಧ ಸಿಡಿದೆದ್ದಿರುವ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್‌ ಕಿತ್ತೆಸೆದು ಅಲ್ಲಿನ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಅಮಿನಿಯ ಸಾವು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸ್ಥಾಪನೆಯಾದ ನಂತರ ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಪ್ರತಿಭಟನೆಯಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಆಡಳಿತವನ್ನು ಕಿತ್ತೊಗೆಯಲು  ಸಾವಿರಾರು ಜನರು ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಿದ್ದಾಗ ನೂರಾರು ಜನರು ಕೊಲ್ಲಲ್ಪಟ್ಟಟ್ಟಿದ್ದಾರೆ. ಈ ನಡುವೆ ಫೀಫಾ ಹಿಜಾಬ್‌ ಮಹಿಳೆಯರ ಚಿತ್ರ ಹಂಚಿಕೊಂಡಿದ್ದು ಹಿಜಾಬ್‌ ಬೆಂಬಲಿಸಿದಂತಾಗಿ ಅಲ್ಲಿನ ಮಹಿಳೆಯರ ಕಣ್ಣು ಕೆಂಪಾಗಿಸಿದೆ. ಈ ಬಗ್ಗೆ ಇರಾನ್‌ ಮಹಿಳೆಯರಿಂದ ಸಾಮಾಜಿ ತಾಣಗಳಲ್ಲಿ ಸಾವಿರಾರು ಆಕ್ರೋಶದ ಸಂದೇಶಗಳು ಹರಿದುಬರುತ್ತಿವೆ. ಫೀಫಾಗೆ ನಾಚಿಕೆಯಾಗ್ಬೇಕು. ಎಂದು ಹಲವು ಮಹಿಳೆಯರು ಕಿಡಿಕಾರಿದ್ದಾರೆ. ಫೀಫಾ ನಡೆಗೆ ಜಾಗತಿಕವಾಗಿಯೂ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!