ನಾಡಿಗೇ ಸಂಕಷ್ಟ ತಂದಿಟ್ಟ ನಾಚಿಕೆಗೇಡಿನ ಸರ್ಕಾರ ಈಗಲೇ ರಾಜೀನಾಮೆ ನೀಡಬೇಕು: ಅಶ್ವತ್ಥನಾರಾಯಣ್ ಆಗ್ರಹ

ಹೊಸದಿಗಂತ ವರದಿ ಬೆಂಗಳೂರು:

ರಾಜ್ಯದ ಕಾಂಗ್ರೆಸ್ ಸರಕಾರ ಎಡವಟ್ಟುಗಳ ಸರಕಾರ. ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯದ ಮಾಜಿ ಸಚಿವ ಡಾ. ಸಿ.ಎನ್.ಅಶ್ವತ್ಥ್‍ನಾರಾಯಣ್ ಟೀಕಿಸಿದರು.

“ಸ್ವಾತಂತ್ರ್ಯ ಉದ್ಯಾನವನ”ದಲ್ಲಿ ಬಿಜೆಪಿ ವತಿಯಿಂದ ಇಂದು ನಡೆದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿ, ಐಟಿ ದಾಳಿ ಸಂಬಂಧ ಸಿಬಿಐ ತನಿಖೆ ಮಾಡಿ ಹಣದ ಮೂಲವನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು. ನಾಚಿಕೆ ಇಲ್ಲದ ಸರಕಾರ ಇದು. ಪ್ರತಿಯೊಂದು ವಿಚಾರದಲ್ಲೂ ನಾಡಿಗೇ ಸಂಕಷ್ಟ ತಂದಿಟ್ಟ ಕಾಂಗ್ರೆಸ್ ಸರಕಾರ ಇದೆ. ಈ ಸರಕಾರ ತೊಲಗುವುದನ್ನೇ ಜನ ಬಯಸುತ್ತಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ರಾಜೀನಾಮೆಗೆ ಅವರು ಆಗ್ರಹಿಸಿದರು.

ಸಾಕಷ್ಟು ಆಡಳಿತ ಅನುಭವ, ಪರಿಣತಿ ಇದ್ದರೂ, ಭಾರಿ ಬಹುಮತ ಸಿಕ್ಕಿದರೂ ಜನಾಶೀರ್ವಾದಕ್ಕೆ ತಕ್ಕ ಗೌರವವನ್ನು ನೀಡಿಲ್ಲ. ನಾಮಕಾವಾಸ್ತೆಗೆ ಕೆಲವು ಭಾಗ್ಯಗಳನ್ನು ತೋರಿಸಿ ಲೂಟಿ ಸರಕಾರವನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ರಾಜ್ಯವನ್ನು ಲೂಟಿ ಮಾಡಲು ಮತ್ತು ಸ್ವಾರ್ಥದಾಹ ಹಿಂಗಿಸಲು ಈ ಸರಕಾರ ಮುಂದಾಗಿದೆ. ಏನೇ ಆಪಾದನೆಗೂ ಅದು ಜಗ್ಗುತ್ತಿಲ್ಲ. ಭಂಡತನದ ಉತ್ತರವನ್ನು ನೀಡುತ್ತಿದ್ದಾರೆ. ಗುತ್ತಿಗೆದಾರರು, ಬಿಲ್ಡರ್‍ಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ಷೇಪಿಸಿದರು.

ಈ ಪ್ರತಿಭಟನೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಭಾಸ್ಕರ ರಾವ್, ನೆ.ಲ.ನರೇಂದ್ರ ಬಾಬು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಜಿ, ನಾರಾಯಣ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!