ಶಂಷಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಂಷಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್‌ ಬಂದಿದ್ದು, ಕೆಲಕಾಲ ಭಯದ ವಾತಾವರಣವನ್ನು ಸೃಷ್ಟಿಮಾಡಿತ್ತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಬಾಂಬ್ ಸ್ಕ್ವಾಡ್ ತಂಡಗಳೊಂದಿಗೆ ತಪಾಸಣೆ ನಡೆಸಿದರು.

GMR ಗ್ರಾಹಕ ಕೇಂದ್ರಕ್ಕೆ [email protected] ಹೆಸರಿನಲ್ಲಿ ‘ಇಂದು ರಾತ್ರಿ ಏಳು ಗಂಟೆಗೆ ವಿಮಾನ ನಿಲ್ದಾಣವನ್ನು ಸ್ಫೋಟಿಸಲಾಗುವುದು’ ಎಂದು ಮೇಲ್ ಬಂದ ನಂತರ ಭದ್ರತಾ ಸಿಬ್ಬಂದಿ ಅಲರ್ಟ್‌ ಆಗಿದ್ದಾರೆ. ಸಿಐಎಸ್ಎಫ್ ಕ್ವಿಕ್ ರಿಯಾಕ್ಷನ್ ಟೀಮ್, ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳದೊಂದಿಗೆ ತಪಾಸಣೆ ನಡೆಸಲಾಯಿತು. ಎಲ್ಲಿಯೂ ಬಾಂಬ್ ಪತ್ತೆಯಾಗದ ಕಾರಣ ಬೆದರಿಕೆ ಮೇಲ್ ನಕಲಿ ಎಂದು ತಿಳಿದುಬಂದಿದೆ.

ಸ್ವಲ್ಪ ಹೊತ್ತಿನ ನಂತರ ಕಸ್ಟಮರ್ ಪೋರ್ಟಲ್‌ಗೆ ಇನ್ನೊಂದು ಮೇಲ್ ಬಂದಿದ್ದು, ಅದರಲ್ಲಿ ತನ್ನ ಮಗ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾನೆ. ಆತನ ಪರವಾಗಿ ನಾನು ಕ್ಷಮೆ ಕೂರುತ್ತಿದ್ದೇನೆ, ಹಾಗೆಯೇ ನನ್ನ ಮಗನನ್ನು ಕ್ಷಮಿಸಿಬಿಡಿ ಎನ್ನುವ ಮೇಲ್  ಬಂದಿದೆ. ಜಿಎಂಆರ್ ವಿಮಾನ ನಿಲ್ದಾಣದ ಸಿಬ್ಬಂದಿಯ ದೂರಿನ ಆಧಾರದ ಮೇಲೆ ಶಂಷಾಬಾದ್ ಆರ್‌ಜಿಐಎ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!